ಪೈರಸಿ ವಿಚಾರದಲ್ಲಿ ಸುಮ್ಮನೇ ಕುಳಿತಿಲ್ಲ! ಟೀಕಾಕಾರರಿಗೆ ಕಿಚ್ಚ ಸುದೀಪ್ ಸ್ಪಷ್ಟನೆ

ಬೆಂಗಳೂರು| Krishnaveni K| Last Modified ಶನಿವಾರ, 28 ಸೆಪ್ಟಂಬರ್ 2019 (08:51 IST)
ಬೆಂಗಳೂರು: ಪೈಲ್ವಾನ್ ಪೈರಸಿ ವಿವಾದ ತಣ್ಣಗಾಗಿದೆ ಎಂದು ಟೀಕಿಸುತ್ತಿರುವವರಿಗೆ ಕಿಚ್ಚ ಸುದೀಪ್ ಟ್ವಿಟರ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.

 
ಪೈಲ್ವಾನ್ ಪೈರಸಿ ಮಾಡಿದ ಆರೋಪದಲ್ಲಿ ಒಬ್ಬಾತನನ್ನು ಬಂಧಿಸುತ್ತಿದ್ದಂತೇ ಚಿತ್ರತಂಡ ತಣ್ಣಗಾಗಿದೆಯೇ ಎಂಬ ಪ್ರಶ್ನೆಗಳಿಗೆ ಸುದೀಪ್ ಸ್ಪಷ್ಟನೆ ನೀಡಿದ್ದಾರೆ. ನಾವು ಯಾರೂ ಸುಮ್ಮನೇ ಕುಳಿತಿಲ್ಲ. ಈ ವಿಚಾರವನ್ನು ಚಾಲ್ತಿಯಲ್ಲಿಡಲು ಯಾರೋ ಒಬ್ಬ ಎಂಎಲ್ ಸಿಯನ್ನು ಕರೆತಂದು ಭಾಷಣ ಮಾಡಿಸಬೇಕಿಲ್ಲ ಎಂದು ಸುದೀಪ್ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.
 
‘ಪೈರಸಿ ವಿವಾದದ ಸ್ಥಿತಿ ಗತಿ ಅರಿಯಲು ಬಯಸಿದವರಿಗಾಗಿ... ಈ ವಿಚಾರವನ್ನು ತಣ್ಣಗಾಗಿಸಲು ಪ್ರಯತ್ನ ನಡೆಯುತ್ತಿದೆ ಎನಿಸುತ್ತಿದೆ. ಅಥವಾ ಇದಕ್ಕೆ ಬೆಂಬಲ ನೀಡಲು ಯಾರೋ ಒಬ್ಬ ಎಂಎಲ್ ಸಿಯನ್ನು ಕರೆತಂದು ಭಾಷಣ ಮಾಡಿಸುವುದು ಕಡ್ಡಾಯವೇ? ನನ್ನ ಗೆಳೆಯರು ನನ್ನ ಜತೆಗಿರುವಾಗ ಬೇರೆಯವರ ಬೆಂಬಲದ ಅಗತ್ಯವಿದೆಯೆಂದು ನನಗನಿಸುತ್ತಿಲ್ಲ. ಮತ್ತೆ ಧ್ವನಿಯೆತ್ತುತ್ತೇವೆ. ಖಂಡಿತಾ ನಾನು ವಿರಮಿಸಲ್ಲ’ ಎಂದು ಸುದೀಪ್ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :