ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಅಭಿನಯ ಚಕ್ರವರ್ತಿ ಎಂದೇ ಕರೆಯಿಸಿಕೊಳ್ಳುವ ಕಿಚ್ಚ ಸುದೀಪ್ ಬೇರೆ ಭಾಷೆಗಳಲ್ಲಿ ವಿಲನ್ ಆಗಿಯೂ ಪಾತ್ರ ಮಾಡಲು ಹಿಂದೆ ಮುಂದೆ ನೋಡಲ್ಲ. ಈಗ ಸಿನಿಮಾದಿಂದ ಹಿಡಿದು ನಿನ್ನೆಯಷ್ಟೇ ಬಿಡುಗಡೆಯಾದ ದಬಾಂಗ್ 3 ಯಲ್ಲೂ ಕಿಚ್ಚ ವಿಲನ್ ಆಗಿಯೂ ಗುರುತಿಸಿಕೊಳ್ಳುವಂತಹ ಪಾತ್ರ ಮಾಡಿದ್ದಾರೆ.ಸಾಮಾನ್ಯವಾಗಿ ಹೀರೋ ಆದವರು ವಿಲನ್ ಪಾತ್ರ ಮಾಡಲು ಹಿಂಜರಿಯುತ್ತಾರೆ. ಆದರೆ ಕಿಚ್ಚ ಮಾತ್ರ ಉತ್ತಮ ಪಾತ್ರವೆಂದರೆ ವಿಲನ್ ರೋಲ್ ಮಾಡಲೂ ಹಿಂದೆ ಮುಂದೆ ನೋಡಲ್ಲ.