ಕಿಚ್ಚ ಸುದೀಪ್ ಗೆ ಸಿಕ್ತು ‘ದೊಡ್ಡವರ’ ಶಹಬ್ಬಾಶ್ ಗಿರಿ

ಬೆಂಗಳೂರು| Krishnaveni K| Last Modified ಬುಧವಾರ, 16 ಜನವರಿ 2019 (10:03 IST)
ಬೆಂಗಳೂರು: ಸಂಕ್ರಾಂತಿ ದಿನವಾದ ನಿನ್ನೆ ಸಂಜೆ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಕೆಲವೇ ಕ್ಷಣಗಳಲ್ಲಿ ಭಾರೀ ಲೈಕ್ಸ್ ಪಡೆದುಕೊಂಡಿದೆ.
 
ಕಿಚ್ಚ ಸುದೀಪ್ ಪೈಲ್ವಾನ್ ಅವತಾರ ನೋಡಿ ಅಭಿಮಾನಿಗಳಷ್ಟೇ ಅಲ್ಲದೆ, ಸ್ಯಾಂಡಲ್ ವುಡ್, ಬಾಲಿವುಡ್ ನಟರೂ ಶುಭ ಕೋರಿದ್ದಾರೆ. ಸ್ವತಃ ಸಲ್ಮನಾ ಖಾನ್, ಡ್ಯಾನ್ಸಿಂಗ್ ಸ್ಟಾರ್ ಪ್ರಭುದೇವ, ರಿತೇಶ್ ದೇಶ್ ಮುಖ್, ಸುನಿಲ್ ಶೆಟ್ಟಿ, ಬ್ರಹ್ಮಾನಂದ, ಅಫ್ತಾಬ್ ಶಿವದಾಸಿನಿ ಸೇರಿದಂತೆ ಖ್ಯಾತನಾಮರು ಕಿಚ್ಚ ಸುದೀಪ್ ಗೆ ಟ್ವಿಟರ್ ಮುಖಾಂತರ ಹೊಸ ಲುಕ್ ಗೆ ಶಹಬ್ಬಾಶ್ ಗಿರಿ ಕೊಟ್ಟಿದ್ದಾರೆ. ಸಲ್ಮಾನ್ ಟ್ವೀಟ್ ನೋಡಿ ಸ್ವತಃ ಸುದೀಪ್ ಅಚ್ಚರಿಗೊಂಡಿದ್ದು, ಧನ್ಯವಾದ ಸಲ್ಲಿಸಿದ್ದಾರೆ.
 
ಟ್ವೀಟ್ ಮಾಡಿದ ಪ್ರತಿಯೊಬ್ಬರಿಗೂ ಕಿಚ್ಚ ಸುದೀಪ್ ಧನ್ಯವಾದ ಸಲ್ಲಿಸಿದ್ದಾರೆ. ಇನ್ನು, ಈ ಸಿನಿಮಾ ಸುಮಾರು ಎಂಟು ಭಾಷೆಯಲ್ಲಿ ರಿಲೀಸ್ ಆಗಲಿದೆ ಎಂಬ ಸುದ್ದಿಯಿದೆ. ಅಂತೂ ಕಿಚ್ಚನ ಸಿನಿಮಾ ಈ ಬೇಸಿಗೆ ಕಾಲದಲ್ಲಿ ಹೊಸ ದಾಖಲೆ ಬರೆಯುವ ಸೂಚನೆ ನೀಡಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಇದರಲ್ಲಿ ಇನ್ನಷ್ಟು ಓದಿ :