ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು, ಟ್ರೈಲರ್ ನಲ್ಲಿ ಸುದೀಪ್ ಕುಸ್ತಿ ಅವತಾರದ ಜತೆಗೆ ಡೈಲಾಗ್ ಗಳೇ ಅಭಿಮಾನಿಗಳಲ್ಲಿ ಸಿನಿಮಾ ಬಗ್ಗೆ ಕಿಚ್ಚು ಹಚ್ಚಿಸಿದೆ. ಅದರಲ್ಲೂ ನಾನು ಗೆಲ್ತೀನೋ, ಗೆಲ್ಲಲ್ವೋ ಗೊತ್ತಿಲ್ಲ, ಆದರೆ ಸೋಲನ್ನು ಸುಲಭವಾಗಿ ಒಪ್ಪಿಕೊಳ್ಳಲ್ಲ ಎನ್ನುವ ಕಿಚ್ಚನ ಡೈಲಾಗ್ ಅಭಿಮಾನಿಗಳಿಗೆ ಭಾರೀ ಇಷ್ಟವಾಗಿದೆ. ಅಷ್ಟೇ ಅಲ್ಲ ಕಿಚ್ಚನ ಸಿಕ್ಸ್ ಪ್ಯಾಕ್ ಬಾಡಿ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.ಇನ್ನು, ಕೆಲವರು ಈ ಸಿನಿಮಾ 100