ಬೆಂಗಳೂರು: ಪ್ರಧಾನಿ ಮೋದಿ ವೈದ್ಯಕೀಯ ಸಿಬ್ಬಂದಿಗೆ ಧನ್ಯವಾದ ಸಲ್ಲಿಸಲು ಎರಡು ವಾರಗಳ ಹಿಂದೆ ಚಪ್ಪಾಳೆ ತಟ್ಟುವ ಅಭಿಯಾನಕ್ಕೆ ಕರೆಕೊಟ್ಟಾಗ ಕಿಚ್ಚ ಸುದೀಪ್ ಈ ನಿರ್ಧಾರವನ್ನು ಬೆಂಬಲಿಸಿದ್ದರಲ್ಲದೆ, ಆಗಾಗ ಇಂತಹ ಕೆಲಸ ನಡೆಯುತ್ತಿರಬೇಕು ಎಂದಿದ್ದರು. ಆದರೆ ಕಿಚ್ಚ ಸುದೀಪ್ ಈ ರೀತಿ ಚಪ್ಪಾಳೆ ತಟ್ಟುವುದರಿಂದ ರೋಗ ಗುಣವಾಗುತ್ತದೆ ಎಂದು ಅವೈಜ್ಞಾನಿಕ ಸಿದ್ಧಾಂತವನ್ನು ಬೆಂಬಲಿಸುತ್ತಿದ್ದಾರೆ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವಿವಾದದ ಬಳಿಕ ಕಿಚ್ಚ ಸುದೀಪ್ ಎಚ್ಚೆತ್ತುಕೊಂಡಿದ್ದು, ಈ ಬಾರಿ ದೀಪ