Widgets Magazine

ಭಾರತ-ವಿಂಡೀಸ್ ಏಕದಿನ ಪಂದ್ಯದ ವೇಳೆ ಕಿಚ್ಚ ಸುದೀಪ್ ದಬಾಂಗ್ 3 ಪ್ರಚಾರ

ಚೆನ್ನೈ| Krishnaveni K| Last Modified ಸೋಮವಾರ, 16 ಡಿಸೆಂಬರ್ 2019 (09:32 IST)
ಚೆನ್ನೈ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಕ್ರಿಕೆಟ್ ಪಂದ್ಯದ ವೇಳೆ ಕಿಚ್ಚ ಸುದೀಪ್, ಸಲ್ಮಾನ್ ಖಾನ್ ನಾಯಕರಾಗಿ ತಾವು ಖಳ ನಾಯಕನಾಗಿರುವ ಸಿನಿಮಾ ಪ್ರಚಾರವನ್ನು ಮಾಡಿದ್ದಾರೆ.

 
ಸ್ಟಾರ್ ಸ್ಪೋರ್ಟ್ಸ್ ಕನ್ನಡ ವಾಹಿನಿಯಲ್ಲಿ ಕನ್ನಡ ಕಾಮೆಂಟರಿ ಪ್ರಸಾರವಾಗುತ್ತದೆ. ಈ ವಾಹಿನಿಯಲ್ಲಿ ಕ್ರಿಕೆಟ್ ಕುರಿತ ಚರ್ಚೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕಿಚ್ಚ ಸುದೀಪ್ ಚಿತ್ರದ ಪ್ರಚಾರ ಮಾಡಿದ್ದಾರೆ.
 
ಡಿಸೆಂಬರ್ 20 ರಂದು ಚಿತ್ರ ತೆರೆ ಮೇಲೆ ಬರಲಿದ್ದು, ಕನ್ನಡದಲ್ಲೂ ತೆರೆ ಕಾಣುತ್ತಿದೆ. ಈ ಸಿನಿಮಾ ಪ್ರಚಾರಕ್ಕಾಗಿ ಸ್ವತಃ ಸಲ್ಮಾನ್ ಖಾನ್ ಸದ್ಯದಲ್ಲೇ ಬೆಂಗಳೂರಿಗೆ ಬರಲಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :