Widgets Magazine

ದಾದಾ ಸಾಹೇಬ್ ಪ್ರಶಸ್ತಿ ಸ್ವೀಕರಿಸಿದ ಕಿಚ್ಚ ಸುದೀಪ್

ಬೆಂಗಳೂರು| Krishnaveni K| Last Modified ಶುಕ್ರವಾರ, 21 ಫೆಬ್ರವರಿ 2020 (09:18 IST)
ಬೆಂಗಳೂರು: ಬಾಲಿವುಡ್ ನ ದಬಾಂಗ್ 3 ಸಿನಿಮಾದ ನಟನೆಗಾಗಿ ದಾದಾ ಸಾಹೇಬ್ ಇಂಟರ್ ನ್ಯಾಷನಲ್ ಫಿಲಂ ಫೆಸ್ಟಿವಲ್ ಅವಾರ್ಡ್ ಗೆದ್ದಿದ್ದ ಕಿಚ್ಚ ಸುದೀಪ್ ಪ್ರಶಸ್ತಿ ಸ್ವೀಕರಿಸಿದ್ದಾರೆ.

 
ಪ್ರಶಸ್ತಿ ಸ್ವೀಕರಿಸಿದ ಬಳಿಕ ಟ್ರೋಫಿ ಜತೆಗಿನ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿರುವ ಕಿಚ್ಚ ಸುದೀಪ್ ತಮ್ಮನ್ನು ಬೆಂಬಲಿಸಿದ ಅಭಿಮಾನಿಗಳಿಗೆ, ಸ್ನೇಹಿತರಿಗೆ, ಮಾಧ್ಯಮದವರಿಗೆ ಧನ್ಯವಾದ ಸಲ್ಲಿಸಿದ್ದಾರೆ.
 
ಬಾಲಿವುಡ್ ಸಿನಿಮಾದಲ್ಲಿನ ನಟನೆಗೆ ಅದರಲ್ಲೂ ವಿಲನ್ ಪಾತ್ರಕ್ಕಾಗಿ ಕಿಚ್ಚ ಸುದೀಪ್ ಪ್ರಶಸ್ತಿ ಗೆದ್ದಿರುವುದು ವಿಶೇಷವಾಗಿದೆ. ಸುದೀಪ್ ವಿಲನ್ ಪಾತ್ರದ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು.




ಇದರಲ್ಲಿ ಇನ್ನಷ್ಟು ಓದಿ :