ಬೆಂಗಳೂರು: ಕಿಚ್ಚ ಸುದೀಪ್ ಹೈದರಾಬಾದ್ ನಲ್ಲಿ ಫ್ಯಾಂಟಮ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಅದರ ಜತೆಗೇ ದಿನಕ್ಕೊಂದು ವಿಡಿಯೋ, ಫೋಟೋ ಮೂಲಕ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸುತ್ತಿದ್ದಾರೆ. ಮೊನ್ನೆಯಷ್ಟೇ ಕಾಡಿನ ಸೆಟ್ ನಲ್ಲಿ ಮೊದಲ ಶಾಟ್ ತೆಗೆದಿದ್ದನ್ನು ಹೇಳಿದ್ದ ಕಿಚ್ಚ ಕುತೂಹಲಕಾರಿ ವಿಡಿಯೋವನ್ನೂ ಪ್ರಕಟಿಸಿದ್ದರು. ಈ ವಿಡಿಯೋ ನೋಡಿ ಕಿಚ್ಚನ ಅಭಿಮಾನಿಗಳಲ್ಲಿ ಸಿನಿಮಾ ಬಗ್ಗೆ ಕುತೂಹಲ ಹೆಚ್ಚಾಗಿದೆ.ಇದೀಗ ಕಿಚ್ಚ ತಾವು ಫ್ಯಾಂಟಮ್ ಸಿನಿಮಾದಲ್ಲಿ ತೊಡುವ ಕಾಸ್ಟ್ಯೂಮ್ ನ್ನು ಬಹಿರಂಗಪಡಿಸಿದ್ದಾರೆ. ಒಂದು ಟೋಪಿ, ಖಾಕಿ ಶೈಲಿಯ