Photo Courtesy: Twitterಬೆಂಗಳೂರು: ಕಿಚ್ಚ ಸುದೀಪ್ ಬಹಳ ದಿನಗಳಿಂದ ಹೊಸ ಸಿನಿಮಾ ಘೋಷಣೆ ಮಾಡಿಲ್ಲ. ಆದರೆ ಮೂರು ಕತೆಗಳನ್ನು ಒಪ್ಪಿಕೊಂಡಿರುವುದಾಗಿ ಹೇಳಿದ್ದರು.ಕಿಚ್ಚನ ಮುಂದಿನ ಸಿನಿಮಾ ಯಾವುದು ಎಂಬ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲವಿದೆ. ಇದರ ನಡುವೆಯೇ ಕಿಚ್ಚ ಮೂರು ಕತೆಗಳನ್ನು ಫೈನಲ್ ಮಾಡಿದ್ದು, ಸದ್ಯದಲ್ಲೇ ಘೋಷಣೆ ಮಾಡುವೆ ಎಂದಿದ್ದರು.ಈ ಮೂರು ಸಿನಿಮಾಗಳ ಪೈಕಿ ಒಂದು ಸಿನಿಮಾ ನಿರ್ದೇಶನ ಮಾಡುವುದು ವಿಕ್ರಾಂತ್ ರೋಣ ಸಿನಿಮಾ ಮಾಡಿದ್ದ ಅನೂಪ್ ಭಂಡಾರಿ ಎನ್ನುವುದು ಪಕ್ಕಾ ಆಗಿದೆ.