ಬೆಂಗಳೂರು: ಕಿಚ್ಚ ಸುದೀಪ್ ಹೆಬ್ಬಲಿ ಸಿನಿಮಾದಲ್ಲಿ ಯೋಧನ ಪಾತ್ರ ನಿರ್ವಹಿಸಿದ್ದರು. ಇದಕ್ಕಾಗಿ ಅವರು ಕಾಶ್ಮೀರದಲ್ಲಿ ಶೂಟಿಂಗ್ ಮಾಡಿದ್ದರು. ಆ ದಿನಗಳನ್ನು ಕಿಚ್ಚ ಈಗ ಸ್ಮರಿಸಿಕೊಂಡಿದ್ದಾರೆ.ಹೆಬ್ಬುಲಿ ಸಿನಿಮಾ ಟಿವಿಯಲ್ಲಿ ವೀಕ್ಷಿಸಿದ ಕಿಚ್ಚ ಹಿಂದಿನ ದಿನಗಳನ್ನು ಮೆಲುಕು ಹಾಕಿಕೊಂಡಿದ್ದಾರೆ. ಕಾಶ್ಮೀರದಲ್ಲಿ ಶೂಟಿಂಗ್ ವೇಳೆ ತಾವು ಮಾಡಿದ್ದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.ಕಾಶ್ಮೀರ ಭೂಮಿ ಮೇಲಿನ ಸ್ವರ್ಗ ಎಂದಿರುವ ಕಿಚ್ಚ ಮುಂದಿನ ದಿನಗಳಲ್ಲಿ ಇನ್ನಷ್ಟು ವಿಡಿಯೋಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.