ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ ನಟಿಸುತ್ತಿರುವ ಯುಐ ಸಿನಿಮಾದ ಟೀಸರ್ ಲಾಂಚ್ ಈವೆಂಟ್ ಇದೇ ಜನವರಿ 8 ರಂದು ನಡೆಯಲಿದೆ.ಉಪೇಂದ್ರ ಬಹಳ ದಿನಗಳ ನಂತರ ನಿರ್ದೇಶಿಸಿರುವ ಸಿನಿಮಾವಿದು. ಹೀಗಾಗಿ ಉಪ್ಪಿ ಈ ಟೀಸರ್ ಬಿಡುಗಡೆ ಕಾರ್ಯಕ್ರಮವನ್ನು ಜನರ ಮುಂದೆಯೇ ಮಾಡಲು ಹೊರಟಿದ್ದಾರೆ. ಇದಕ್ಕಾಗಿ ಅದ್ಧೂರಿ ಕಾರ್ಯಕ್ರಮವನ್ನೂ ಏರ್ಪಡಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಉಪೇಂದ್ರ ಆಪ್ತರಾದ ಕಿಚ್ಚ ಸುದೀಪ್, ಶಿವರಾಜ್ ಕುಮಾರ್ ಮತ್ತು ತೆಲುಗು ನಿರ್ಮಾಪಕ ಅಲ್ಲು ಅರವಿಂದ್ ಕೂಡಾ ಆಗಮಿಸಲಿದ್ದಾರೆ.ಲಹರಿ