ಬಿಗ್ ಬಾಸ್ ಶೋನಲ್ಲಿ ಈ ವಾರವೂ ಸುದೀಪ್ ಇಲ್ಲ! ಕಾರಣ ಬೇರೆಯೇ!

ಬೆಂಗಳೂರು| Krishnaveni K| Last Modified ಶನಿವಾರ, 1 ಮೇ 2021 (12:22 IST)
ಬೆಂಗಳೂರು: ಅನಾರೋಗ್ಯದಿಂದ ಗುಣಮುಖರಾದ ಹಿನ್ನಲೆಯಲ್ಲಿ ಕಿಚ್ಚ ಸುದೀಪ್ ಈ ವಾರ ಬಿಗ್ ಬಾಸ್ ವಾರಂತ್ಯದ ಶೋ ನಡೆಸಿಕೊಡಲಿದ್ದಾರೆ ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಅದೀಗ ಸುಳ್ಳಾಗಿದೆ.

 
ಈ ವಾರವೂ ಕಿಚ್ಚ ಸುದೀಪ್ ಶೋನಲ್ಲಿ ಇರಲ್ಲ ಎಂದು ಕಲರ್ಸ್ ವಾಹಿನಿ ಸ್ಪಷ್ಟಪಡಿಸಿದೆ. ಸ್ವತಃ ಕಿಚ್ಚ ಸುದೀಪ್ ಕೂಡಾ ಟ್ವೀಟ್ ಮೂಲಕ ಈ ವಾರ ಬಿಗ್ ಬಾಸ್ ಶೂಟಿಂಗ್ ಇಲ್ಲ ಎಂದಿದ್ದಾರೆ. ಇದಕ್ಕೆ ಕಾರಣ ಸುದೀಪ್ ಅನಾರೋಗ್ಯವಲ್ಲ.
 
ಬದಲಾಗಿ ಈಗ ಕೊರೋನಾ ಪರಿಸ್ಥಿತಿಯಿಂದಾಗಿ ಶೂಟಿಂಗ್ ಗೆ ನಿರ್ಬಂಧ ವಿಧಿಸಲಾಗಿದೆ. ಬಿಗ್ ಬಾಸ್ ವಾರಂತ್ಯದ ಶೂಟಿಂಗ್ ಗೆ ಕೆಲವು ಜನ ಒಟ್ಟು ಸೇರಬೇಕಾಗುತ್ತದೆ. ಪ್ರಸಕ್ತ ಪರಿಸ್ಥಿತಿಯಲ್ಲಿ ಅದು ಸಾಧ್ಯವಿಲ್ಲದಿರುವುದರಿಂದ ಶೂಟಿಂಗ್ ರದ್ದುಗೊಳಿಸಿರುವುದಾಗಿ ಕಲರ್ಸ್ ವಾಹಿನಿ ಮತ್ತು ಸುದೀಪ್ ಸ್ಪಷ್ಟನೆ ನೀಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :