ಬೆಂಗಳೂರು: ಪೈಲ್ವಾನ್ ಶೂಟಿಂಗ್ ಮುಗಿಸಿಕೊಂಡ ಕಿಚ್ಚ ಸುದೀಪ್ ಇದೀಗ ಹೊಸ ಶಾಲೆಗೆ ಹೊರಟಿದ್ದಾರೆ! ಅಂದರೆ ಮತ್ತೊಂದು ಸಿನಿಮಾ ಶೂಟಿಂಗ್ ಶುರು ಮಾಡಿಕೊಂಡಿದ್ದಾರೆ.ಇದನ್ನು ಹೊಸ ಶಾಲೆಗೆ ತೆರಳುವ ಅನುಭವಕ್ಕೆ ಹೋಲಿಸಿಕೊಂಡಿರುವ ಕಿಚ್ಚ ಸುದೀಪ್, ತಾನೂ ಮಗುವಿನಂತೆ ಹೊಸ ವಾತಾವರಣಕ್ಕೆ ಹೊಂದಿಕೊಳ್ಳಬೇಕಿದೆಯಷ್ಟೇ ಎಂದಿದ್ದಾರೆ.ಪೈಲ್ವಾನ್ ಬಳಿಕ ಇದೀಗ ಕೋಟಿಗೊಬ್ಬ 3 ಶೂಟಿಂಗ್ ಪ್ರಾರಂಭಿಸಿರುವುದಾಗಿ ಕಿಚ್ಚ ಸುದೀಪ್ ಹೇಳಿಕೊಂಡಿದ್ದಾರೆ. ಪೈಲ್ವಾನ್ ಶೂಟಿಂಗ್ ಮುಗಿಯಿತು. ಇದೀಗ ಕೋಟಿಗೊಬ್ಬ ಶೂಟಿಂಗ್ ಪ್ರಾರಂಭವಾಗಿದೆ. ಇದು ಒಂಥರಾ ಶಾಲೆ ಬದಲಾಯಿಸುವ ಹಾಗೆ.