ಶಿವಣ್ಣ, ಉಪೇಂದ್ರ, ರವಿಚಂದ್ರನ್ ಪ್ರೀತಿಗೆ ಶರಣೆಂದ ಕಿಚ್ಚ ಸುದೀಪ್

ಬೆಂಗಳೂರು| Krishnaveni K| Last Modified ಭಾನುವಾರ, 2 ಮೇ 2021 (09:24 IST)
ಬೆಂಗಳೂರು: ಅನಾರೋಗ್ಯದಿಂದ ಚೇತರಿಸಿಕೊಂಡ ಕಿಚ್ಚ ಸುದೀಪ್ ತಮ್ಮ ಬಗ್ಗೆ ಕಾಳಜಿ ತೋರಿದವರಿಗೆ ಟ್ವಿಟರ್ ಮೂಲಕ ಧನ್ಯವಾದ ಸಲ್ಲಿಸಿದ್ದಾರೆ.
 

ಅದರಲ್ಲೂ ವಿಶೇಷವಾಗಿ ಕ್ರೇಜಿಸ್ಟಾರ್ ರವಿಚಂದ್ರನ್, ಶಿವರಾಜ್ ಕುಮಾರ್, ಉಪೇಂದ್ರ, ರಿಷಬ್ ಶೆಟ್ಟಿ ತನಗೆ ಖುದ್ದಾಗಿ ಕರೆ ಮಾಡಿ ಕಾಳಜಿ ತೋರಿದರು. ಇವರಿಗೆ ನನ್ನ ವಿಶೇಷ ಧನ್ಯವಾದ ಎಂದು ಸುದೀಪ್ ಹೇಳಿದ್ದಾರೆ.
 
ಕೇವಲ ಚಿತ್ರರಂಗದ ಸ್ನೇಹಿತರು ಮಾತ್ರವಲ್ಲ, ಅಭಿಮಾನಿಗಳಂತೂ ಸುದೀಪ್ ಗುಣಮುಖರಾಗಲೆಂದು ದೇವರ ಮೊರೆ ಹೋಗಿದ್ದರು. ವಿವಿಧ ದೇವಾಲಯಗಳಲ್ಲಿ ಪೂಜೆ, ಹವನ ನಡೆಸಿ ತಮ್ಮ ಮೆಚ್ಚಿನ ನಟ ಸುಧಾರಿಸಲೆಂದು ಪ್ರಾರ್ಥಿಸಿದ್ದರು. ಅವರಿಗೆಲ್ಲರಿಗೂ ಸುದೀಪ್ ಧನ್ಯವಾದ ಸಲ್ಲಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :