ಬೆಂಗಳೂರು: ಹಲವು ವಿಘ್ನಗಳು, ವಿವಾದಗಳ ಬಳಿಕ ಬಿಡುಗಡೆಯಾದ ಕೋಟಿಗೊಬ್ಬ 3 ಕೊನೆಗೂ ಗೆದ್ದಿದೆ. ಈ ಗೆಲುವು ಕಿಚ್ಚ ಸುದೀಪ್ ಮೊಗದಲ್ಲಿ ವಿಶೇಷ ನಗು ತಂದಿದೆ. ರಿಲೀಸ್ ಸಮಯದಲ್ಲೇ ವಿವಾದಕ್ಕೊಳಗಾದ ಕೋಟಿಗೊಬ್ಬ 3 ಒಂದು ದಿನ ತಡವಾಗಿ ಬಿಡುಗಡೆಯಾಯಿತು. ಇದರ ಬಗ್ಗೆ ಆರೋಪ, ಪ್ರತ್ಯಾರೋಪಗಳು ಈಗಲೂ ಮುಂದುವರಿದಿದೆ.ಇದರ ನಡುವೆಯೂ ಅಭಿನಯ ಚಕ್ರವರ್ತಿಯ ಸಿನಿಮಾವನ್ನು ಜನ ಕೈ ಹಿಡಿದಿದ್ದಾರೆ. ಇದಕ್ಕಾಗಿ ಧನ್ಯವಾದ ಸಲ್ಲಿಸಿರುವ ಕಿಚ್ಚ ಸುದೀಪ್, ನಿಮ್ಮ ಹೃದಯದಲ್ಲಿ ನನಗೆ ವಿಶೇಷ ಸ್ಥಾನ