ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಿಗ್ ಬಾಸ್ ವೀಕೆಂಡ್ ಶೋಗೆ ಬರದೇ ಇರುವುದು ಸ್ಪರ್ಧಿಗಳಿಗೆ ಮಾತ್ರವಲ್ಲ, ಅವರ ಅಪ್ಪಟ ಅಭಿಮಾನಿಗಳಿಗೂ ಬೇಸರವುಂಟುಮಾಡಿದೆ. ಮೊದಲ ಎರಡು ವಾರ ಅನಾರೋಗ್ಯದಿಂದಾಗಿ ಸುದೀಪ್ ಶೋನಲ್ಲಿ ಭಾಗಿಯಾಗಿರಲಿಲ್ಲ. ಅನಾರೋಗ್ಯದಿಂದ ಚೇತರಿಸಿದ ಬಳಿಕ ಲಾಕ್ ಡೌನ್ ಘೋಷಣೆಯಾಗಿದ್ದರಿಂದ ಎಲ್ಲಾ ರೀತಿಯ ಮನರಂಜನೆ ಕಾರ್ಯಕ್ರಮಗಳಿಗೆ ಬ್ರೇಕ್ ಬಿತ್ತು.ಹೀಗಾಗಿ ಬಿಗ್ ಬಾಸ್ ವೀಕೆಂಡ್ ಶೋ ಶೂಟಿಂಗ್ ನಡೆಯುತ್ತಿಲ್ಲ. ಆದರೆ ಇದರಿಂದಾಗಿ ಅಭಿಮಾನಿಯೊಬ್ಬರು ತಮ್ಮ ಅಜ್ಜಿ ಸುದೀಪ್ ರನ್ನು ಮಿಸ್