ಬೆಂಗಳೂರು: ಇದು ನಿಜವಾಗಲು ಸಾಧ್ಯವೇ? ಅಂತ ನೀವು ಕೇಳಬಹುದು. ಸಾಹಸಸಿಂಹ ವಿಷ್ಣುವರ್ಧನ್ ನಮ್ಮನ್ನೆಲ್ಲಾ ಅಗಲಿ ಎಷ್ಟೋ ದಿನಗಳಾಗಿವೆ. ಆದರೆ ಈಗ ಹೇಗೆ ಕಿಚ್ಚ ವಿಷ್ಣುದಾದಾಗೆ ನಿರ್ದೇಶನ ಮಾಡಲು ಸಾಧ್ಯ?ನಿಜ ಜೀವನದಲ್ಲಿ ಇದು ಸಾಧ್ಯವಿಲ್ಲದೇ ಇರಬಹುದು. ಆದರೆ ಕನಸಿನಲ್ಲಿ ಸಾಧ್ಯ. ಅಂತಹದ್ದೊಂದು ಕನಸು ಬಿದ್ದಿರುವುದು ನಟಿ ಅನುಪ್ರಭಾಕರ್ ಗೆ. ಶಾಂತಿ ನಿವಾಸ ಸಿನಿಮಾದಲ್ಲಿ ಇವರು ಒಟ್ಟಿಗೇ ನಟಿಸಿದ್ದರು. ಕಿಚ್ಚ ಸುದೀಪ್ ಈ ಸಿನಿಮಾವನ್ನು ನಿರ್ದೇಶಿಸಿದ್ದರು.ಇದೀಗ ಮತ್ತೆ ಅನುಪ್ರಭಾಕರ್ ಗೆ ಹಾಗೊಂದು ಕನಸು