ಪೈಲ್ವಾನ್ ಭಾಗ 2 ಕ್ಕೆ ಗ್ರೀನ್ ಸಿಗ್ನಲ್ ನೀಡಿದ ಕಿಚ್ಚ ಸುದೀಪ್

ಬೆಂಗಳೂರು| Krishnaveni K| Last Modified ಶನಿವಾರ, 28 ಸೆಪ್ಟಂಬರ್ 2019 (08:27 IST)
ಬೆಂಗಳೂರು: ಪೈರಸಿ ಹಾವಳಿ ನಡುವೆಯೂ ಪೈಲ್ವಾನ್ ಭರ್ಜರಿಯಾಗಿ ಗೆದ್ದಿರುವುದರಿಂದ ನಿರ್ದೇಶಕ ಕೃಷ್ಣ ಮತ್ತು ಇಡೀ ಚಿತ್ರತಂಡ ಖುಷಿಯಾಗಿದ್ದು, ಮತ್ತೊಂದು ಭಾಗ ಮಾಡಲು ಸಿದ್ಧತೆ ನಡೆಸಿದೆ.

 
ಪೈಲ್ವಾನ್ ಸಿನಿಮಾಗಾಗಿ ಸುದೀಪ್ ಜಿಮ್ ನಲ್ಲಿ ಸಾಕಷ್ಟು ಬೆವರಿಳಿಸಿದ್ದರು. ಹಾಗಾಗಿ ಈ ಸಿನಿಮಾ ಬಗ್ಗೆ ಕಿಚ್ಚನಿಗೂ ಸಾಕಷ್ಟು ನಿರೀಕ್ಷೆಗಳಿದ್ದವು. ಆ ನಿರೀಕ್ಷೆಗಳನ್ನು ಪ್ರೇಕ್ಷಕ ಹುಸಿ ಮಾಡಲಿಲ್ಲ. ಹೀಗಾಗಿ ಇದೇ ಖುಷಿಯಲ್ಲಿ ನಿರ್ದೇಶಕ ಕೃಷ್ಣ ಈಗ ಮತ್ತೊಂದು ಭಾಗ ಮಾಡಲು ಕಿಚ್ಚ ಸುದೀಪ್ ಬಳಿ ಕತೆ ಹೇಳಿದ್ದಾರಂತೆ.
 
ಅದಕ್ಕೆ ಕಿಚ್ಚ ಒಪ್ಪಿಗೆ ಕೊಟ್ಟಿದ್ದೂ ಆಗಿದೆ. ಬೆಳಿಗ್ಗೆ 4.30 ಗಂಟೆಗೆ ಏಳುವುದು, ರಾತ್ರಿ 8.30 ಕ್ಕೆ ಮಲಗುವುದು, ಡಯಟ್, ಜಿಮ್ ಎಲ್ಲವೂ ಮತ್ತೆ ಮಾಡಬೇಕಾಗಿದೆ. ಅದರ ಜತೆಗೆ ಪೈರಸಿ ಹಾವಳಿ. ಏನೇ ಇದ್ದರೂ ಮತ್ತೆ ಮಾಡಲು ನಾನು ರೆಡಿ ಎಂದು ಕಿಚ್ಚ ಮತ್ತೆ ಅಖಾಡಕ್ಕಿಳಿಯಲು ಸಿದ್ಧರಾಗಿದ್ದಾರೆ. ಮೂಲಗಳ ಪ್ರಕಾರ ಕೋಟಿಗೊಬ್ಬ 3 ಬಳಿಕ ಪೈಲ್ವಾನ್ ಭಾಗ 2 ಆರಂಭವಾಗಲಿದೆ. ಆದರೆ ಈ ಭಾಗದಲ್ಲಿ ಸುದೀಪ್ ಪಾತ್ರ ಹೇಗಿರಬಹುದು ಎಂಬುದು ಸಸ್ಪೆನ್ಸ್.
ಇದರಲ್ಲಿ ಇನ್ನಷ್ಟು ಓದಿ :