ಬೆಂಗಳೂರು: ಅಭಿನಯದ ಮೂಲಕ ಸಾವಿರಾರು ಜನರ ಮನಗೆದ್ದಿರುವ ಕಿಚ್ಚ ಸುದೀಪ್ ಈಗ ರಾಜಕೀಯಕ್ಕೆ ಕಾಲಿಡುವ ಸುದ್ದಿ ಬಂದಿದೆ.ಚುನಾವಣೆ ಹೊಸ್ತಿಲಲ್ಲಿ ಸಿನಿಮಾ ಸೆಲೆಬ್ರಿಟಿಗಳು ರಾಜಕೀಯ ಅಖಾಡಕ್ಕಿಳಿಯುವ ಹೊಸತೇನಲ್ಲ. ಈಗ ಕಿಚ್ಚ ಸುದೀಪ್ ಕೂಡಾ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿ ಬಲವಾಗಿ ಕೇಳಿಬರುತ್ತಿದೆ.ಕಿಚ್ಚ ಸುದೀಪ್ ವಿವಿಧ ರಾಜಕೀಯ ಪಕ್ಷಗಳ ನಾಯಕರೊಂದಿಗೆ ಆತ್ಮೀಯತೆಯಿದೆ. ಅದರಲ್ಲೂ ಸಿಎಂ ಬಸವರಾಜ ಬೊಮ್ಮಾಯಿ ಅವರೊಂದಿಗೆ ಅವರ ಸಂಬಂಧ ವಿಶೇಷವಾಗಿದೆ. ಇದೇ ಆಪ್ತತೆಯಿಂದ ಅವರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿಯಿದೆ.