ರಾಜೇಂದ್ರ ಪೊನ್ನಪ್ಪ ಫ್ಯಾಮಿಲಿ ಪರಿಚಯಿಸಲಿದ್ದಾರೆ ಕಿಚ್ಚ ಸುದೀಪ್

ಬೆಂಗಳೂರು| Krishnaveni K| Last Modified ಶುಕ್ರವಾರ, 26 ನವೆಂಬರ್ 2021 (09:50 IST)
ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್-ನವ್ಯಾ ನಾಯರ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಮಲಯಾಳಂ ರಿಮೇಕ್ ಸಿನಿಮಾದ ಟ್ರೈಲರ್ ಲಾಂಚ್ ಇಂದು ನಡೆಯಲಿದೆ.

ಮಲಯಾಳಂನಲ್ಲಿ ಮೋಹನ್ ಲಾಲ್ ಅಭಿನಯಿಸಿದ್ದ ದೃಶ್ಯಂ 1 ಮತ್ತು 2 ನೇ ಭಾಗ ಭರ್ಜರಿ ಹಿಟ್ ಆಗಿತ್ತು. ಕನ್ನಡದಲ್ಲೂ ದೃಶ್ಯ 1 ನೇ ಭಾಗ ಹಿಟ್ ಆಗಿತ್ತು. ಇದೀಗ ಎರಡನೇ ಭಾಗದೊಂದಿಗೆ ರಾಜೇಂದ್ರ ಪೊನ್ನಪ್ಪ ಮತ್ತು ಫ್ಯಾಮಿಲಿ ನಿಮ್ಮೆದುರಿಗೆ ಬರಲಿದ್ದಾರೆ.


ಪಿ. ವಾಸು ನಿರ್ದೇಶನದ ದೃಶ್ಯ 2 ಸಿನಿಮಾದ ಶೂಟಿಂಗ್ ಎಲ್ಲಾ ಮುಕ್ತಾಯವಾಗಿದ್ದು, ಇಂದು ರಾತ್ರಿ 8 ಗಂಟೆಗೆ ಟ್ರೈಲರ್ ಲಾಂಚ್ ಆಗಲಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ದೃಶ್ಯ 2 ಟ್ರೈಲರ್ ಲಾಂಚ್ ಮಾಡಲಿದ್ದಾರೆ.ಮುಂದಿನ ತಿಂಗಳು ಚಿತ್ರ ಬಿಡುಗಡೆಯಾಗುವ ಸಾಧ‍್ಯತೆಯಿದೆ.


ಇದರಲ್ಲಿ ಇನ್ನಷ್ಟು ಓದಿ :