ಬೆಂಗಳೂರು: ಪೈಲ್ವಾನ್ ಸಿನಿಮಾ ಪೈರಸಿ ಮಾಡಿದ್ದರ ಬಗ್ಗೆ ದರ್ಶನ್ ಅಭಿಮಾನಿಗಳು ಮತ್ತು ಕಿಚ್ಚ ಸುದೀಪ್ ಅಭಿಮಾನಿಗಳ ನಡುವಿನ ಕೆಸರೆರಚಾಟಕ್ಕೆ ಸುದೀಪ್ ಮಾಡಿದ ಒಂದು ಸುದೀರ್ಘ ಟ್ವೀಟ್ ಕೊನೆ ಹಾಡುತ್ತಾ? ನಿನ್ನೆ ಟ್ವಿಟರ್ ನಲ್ಲಿ ತಮ್ಮ ಅಭಿಮಾನಿಗಳಿಗೆ ಪತ್ರ ಬರೆದಿರುವ ಸುದೀಪ್ ಈ ವಾರ್ ಇಲ್ಲಿಗೇ ಕೊನೆಯಾಗಬೇಕು. ಸುಮ್ಮನಿರುವುದರಿಂದ ನಾವು ಯಾರೂ ಸಣ್ಣವರಾಗಲ್ಲ. ನಾನು ಯಾವುದೇ ನಟನ ಮೇಲೆ ಆರೋಪ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.ಇದರ ಜತೆಗೆ ನಾನು ಯಾರಿಗೂ ಎಚ್ಚರಿಕೆ