ಬೆಂಗಳೂರು: ಪೈಲ್ವಾನ್ ಪೈರಸಿಗೆ ದರ್ಶನ್ ಅಭಿಮಾನಿಗಳು ಕಾರಣ ಎಂಬ ಕೆಲವು ಕಿಡಿಗೇಡಿಗಳ ಆರೋಪದ ಬೆನ್ನಲ್ಲೇ ಕನ್ನಡ ಚಿತ್ರರಂಗದ ಇಬ್ಬರು ಖ್ಯಾತ ನಟರಾದ ದರ್ಶನ್ ಮತ್ತು ಕಿಚ್ಚ ಸುದೀಪ್ ನಡುವಿನ ಶೀತಲ ಸಮರಕ್ಕೆ ಮತ್ತೆ ಶುರುವಾಗಿದೆ.ತಮ್ಮ ಅಭಿಮಾನಿಗಳ ಮೇಲೆ ಗೂಬೆ ಕೂರಿಸಿದ್ದಕ್ಕೆ ಸಿಟ್ಟಾದ ದರ್ಶನ್ ಟ್ವೀಟ್ ಮಾಡಿ ಸದ್ಯಕ್ಕೆ ನಾನು ಬೆಂಗಳೂರಿನಲ್ಲಿ ಇಲ್ಲ, ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದೇನೆ. ಸದ್ಯಕ್ಕೆ ಕೇಳಿಬರುತ್ತಿರುವ ಕೆಲವು ವ್ಯಕ್ತಿಗಳ ಬಗ್ಗೆ ಒಂದು ಕಿವಿ ಮಾತು- ನನ್ನ ಅನ್ನದಾತರು,