ಬೆಂಗಳೂರು: ಕಳೆದ ವಾರ ಅನುಪಮಾ ಗೌಡ ಜತೆ ವಾರದ ಕತೆ ಕಿಚ್ಚನ ಜತೆ ಸಂವಾದ ನಡೆಸುವಾಗಲೇ ಕಿಚ್ಚ ಸುದೀಪ್ ತಮಗೆ ಕೊಂಚ ಆರೋಗ್ಯ ಕೈ ಕೊಟ್ಟಿದೆ ಎಂದು ಹೇಳಿಕೊಂಡಿದ್ದರು. ಇದಾದ ಬಳಿಕ ಸುದೀಪ್ ಕೆಲವು ದಿನ ಬೆಡ್ ನಿಂದ ಮೇಲೇಳಲಿಲ್ಲವಂತೆ! ಅನಾರೋಗ್ಯಕ್ಕೆ ತುತ್ತಾಗಿದ್ದ ಕಿಚ್ಚ ಇದೀಗಷ್ಟೇ ಚೇತರಿಸಿಕೊಳ್ಳುತ್ತಿದ್ದು, ಬ್ಯುಸಿ ಶೆಡ್ಯೂಲ್ ಗೆ ಹೊಂದಿಕೊಳ್ಳುತ್ತಿರುವುದಾಗಿ ಹೇಳಿಕೊಂಡಿದ್ದಾರೆ.ಒಂದೆಡೆ ವಿಲನ್ ಸಿನಿಮಾ ಶೂಟಿಂಗ್ ಮುಗಿಸುವ ಧಾವಂತ, ಇನ್ನೊಂದೆಡೆ ಬಿಗ್ ಬಾಸ್ ಫೈನಲ್ ಶೂಟಿಂಗ್.