ಬೆಂಗಳೂರು: ಸುಖಾ ಸುಮ್ಮನೇ ತಮ್ಮ ಹೆಸರು, ಸಿನಿಮಾ ಹೆಸರು ಹೇಳಿಕೊಂಡು ವಿವಾದವೆಬ್ಬಿಸುವವರ ವಿರುದ್ಧ ಕಿಚ್ಚ ಸುದೀಪ್ ಪದೇ ಪದೇ ಟ್ವಿಟರ್ ಪೇಜ್ ನಲ್ಲಿ ಸ್ಪಷ್ಟನೆ ಕೊಡುತ್ತಲೇ ಇರುತ್ತಾರೆ. ಇದೀಗ ಮತ್ತೆ ಅಂತಹದ್ದೇ ಕೆಲಸ ಮಾಡಿದ್ದಾರೆ.ಆಗಿದ್ದಿಷ್ಟೇ. ದುನಿಯಾ ವಿಜಿ ಮತ್ತು ಪುತ್ರ ಜತೆಯಾಗಿ ಅಭಿನಯಿಸಿರುವ ಕುಸ್ತಿ ಸಿನಿಮಾ ಟೀಸರ್ ನಲ್ಲಿ ನಿನ್ನಂಥಾ ಸಾವಿರ ಪೈಲ್ವಾನ್ ಗೆ ನನ್ನಪ್ಪ ಒಬ್ಬನೇ ಉಸ್ತಾದ್ ಎಂದ ಡೈಲಾಗ್ ವಿಚಾರವಾಗಿ ಕಿಚ್ಚ ಅಭಿಮಾನಿಗಳು ಗರಂ ಆಗಿದ್ದಾರೆ ಎಂದು