ಬೆಂಗಳೂರು: ಪೈಲ್ವಾನ್ ಸಿನಿಮಾ ಪೈರಸಿ ಮಾಡಿದ ಆರೋಪದಲ್ಲಿ ರಾಕೇಶ್ ಎಂಬಾತನನ್ನು ಬಂಧಿಸಿದ ಬೆನ್ನಲ್ಲೇ ಕಿಚ್ಚ ಸುದೀಪ್ ಟ್ವಿಟರ್ ನಲ್ಲಿ ಪೈರಸಿ ಮಾಡುವವರ ವಿರುದ್ಧ ಗುಡುಗಿದ್ದಾರೆ.ಪೈರಸಿಯಾಗುತ್ತಿದ್ದಂತೇ ಇದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಕೆಲಸ ಎಂದು ಕಿಚ್ಚ ಸುದೀಪ್ ಅಭಿಮಾನಿಗಳು ಕೆಲವರು ಆರೋಪಿಸಿದ್ದರು. ಇದಕ್ಕೆ ಸಿಟ್ಟಿಗೆದ್ದಿದ್ದ ನಟ ದರ್ಶನ್ ನನ್ನ ಅನ್ನದಾತರನ್ನು ಕೆಣಕಲು ಬಂದರೆ ಸುಮ್ಮನಿರೋಲ್ಲ ಎಂದು ಎಚ್ಚರಿಕೆ ನೀಡಿ ಟ್ವೀಟ್ ಮಾಡಿದ್ದರು. ಅದಕ್ಕೆ ಪ್ರತಿಯಾಗಿ ಕಿಚ್ಚ ಸುದೀರ್ಘ ಟ್ವಿಟರ್ ನಲ್ಲಿ