ಸಿಎಂ ಬಸವರಾಜ ಬೊಮ್ಮಾಯಿ ಸಹಾಯ ನೆನೆದ ಕಿಚ್ಚ ಸುದೀಪ್

ಬೆಂಗಳೂರು| Krishnaveni K| Last Modified ಗುರುವಾರ, 29 ಜುಲೈ 2021 (10:00 IST)
ಬೆಂಗಳೂರು: ನಿನ್ನೆ ಪ್ರಮಾಣ ವಚನ ಸ್ವೀಕರಿಸಿ ರಾಜ್ಯದ 30 ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿಕೊಂಡ ಬಸವರಾಜ ಬೊಮ್ಮಾಯಿ ಬಗ್ಗೆ ಕಿಚ್ಚ ಸುದೀಪ್ ಹೊಸ ವಿಚಾರ ಹೇಳಿದ್ದಾರೆ.
 

ನೂತನ ಸಿಎಂ ಆಗಿ ಆಯ್ಕೆಯಾದ ಬಸವರಾಜ ಬೊಮ್ಮಾಯಿಗೆ ಶುಭ ಕೋರಿರುವ ಕಿಚ್ಚ ಸುದೀಪ್ ತಮಗೆ ವೈಯಕ್ತಿಕವಾಗಿ ಅವರಿಂದ ಸಹಾಯವಾಗಿದೆ ಎಂದಿದ್ದಾರೆ.
 
‘ನಿಮ್ಮ ಸರಳತೆ ನೋಡುತ್ತಾ ಬೆಳೆದೆ. ನನ್ನ ವೃತ್ತಿ ಜೀವನದ ಆರಂಭದಲ್ಲಿ ನನಗೆ ಬೆನ್ನುಲುಬಾಗಿ ನಿಂತಿದ್ದರು. ನಿಮಗೆ ಶುಭ ಹಾರೈಕೆ ಮಾಮ’ ಎಂದು ಶುಭ ಹಾರೈಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :