ಬೆಂಗಳೂರು: ಕಿಚ್ಚ ಸುದೀಪ್ ಗೆ ಪರಭಾಷೆಯ ನಟರೊಂದಿಗೂ ಉತ್ತಮ ಸ್ನೇಹವಿದೆ. ಇದೀಗ ಸುದೀಪ್ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಬಗ್ಗೆ ನೀವೇ ನನ್ನ ಸ್ಪೂರ್ತಿ ಎಂದು ಮನಃತುಂಬಿ ಹಾರೈಸಿದ್ದಾರೆ. ಹಲವು ಭಾಷೆಗಳ ನೂರಾರು ಸಿನಿಮಾಗಳಲ್ಲಿ ಅಭಿನಯಿಸಿರುವ ಮೋಹನ್ ಲಾಲ್ ಇದೇ ಮೊದಲ ಬಾರಿಗೆ ನಿರ್ದೇಶನಕ್ಕಿಳಿಯುತ್ತಿದ್ದಾರೆ. ‘ಬರೋಝ್’ ಎನ್ನುವ ಸಿನಿಮಾ ಮೂಲಕ ಮೋಹನ್ ಲಾಲ್ ನಿರ್ದೇಶಕನ ಕ್ಯಾಪ್ ತೊಡಲಿದ್ದಾರೆ. ಇದು ಅವರ ಮೊದಲ ನಿರ್ದೇಶನದ ಸಿನಿಮಾವಾಗಿದ್ದು, ನಿನ್ನೆಯಷ್ಟೇ ಅದರ ಮುಹೂರ್ತ