ಕೆಲ ದಿನಗಳ ಹಿಂದಷ್ಟೇ ಗಂಟುಮೂಟೆ ಚಿತ್ರದ ಟ್ರೇಲರ್ ಬಿಡುಗಡೆಯಾಗಿತ್ತು. ಹದಿಹರೆಯದ ಹೊಸ್ತಿಲಲ್ಲಿರೋ ಹುಡುಗಿಯೊಬ್ಬಳ ದೃಷ್ಟಿಯಲ್ಲಿ ತೆರೆದುಕೊಳ್ಳೋ ಈ ಕಥೆಯ ಸುಳಿವಿಗೆ, ಅದು ಮೂಡಿ ಬಂದಿದ್ದ ರೀತಿಗೆ ಪ್ರೇಕ್ಷಕರೆಲ್ಲ ಖುಷಿಗೊಂಡಿದ್ದರು. ಈ ಮೂಲಕ ರೂಪಾ ರಾವ್ ಮೂಲಕ ಭರವಸೆಯ ಮಹಿಳಾ ನಿರ್ದೇಶಕಿಯ ಆಗಮನವಾದ ಲಕ್ಷಣಗಳೂ ಕೂಡಾ ದಟ್ಟವಾಗಿಯೇ ಗೋಚರಿಸಿದ್ದವು. ಇದೀಗ ಈ ಟ್ರೇಲರ್ ಅನ್ನು ಕಿಚ್ಚ ಸುದೀಪ್ ಕೂಡಾ ಮೆಚ್ಚಿಕೊಂಡು ಟ್ವೀಟ್ ಮಾಡಿದ್ದಾರೆ. ಚಿತ್ರೀಕರಣವೂ ಸೇರಿದಂತೆ ಅದೆಷ್ಟೇ ಬ್ಯುಸಿಯಾಗಿದ್ದರೂ ಕೂಡಾ ಹೊಸಾ