ರಿಯಲ್ ಸ್ಟಾರ್ ಉಪೇಂದ್ರ ನಟಿಸಿರುವ ಐ ಲವ್ ಯೂ ಚಿತ್ರವೀಗ ಬಿಡುಗಡೆಯ ಕಡೇಯ ಕ್ಷಣಗಳಲ್ಲಿ ಅಗಾಧವಾದ ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ವಿಶೇಷವೆಂದರೆ, ಉಪ್ಪಿ, ನಾಯಕಿಯರಾದ ರಚಿತಾ ರಾಮ್ ಮತ್ತು ಸೋನು ಗೌಡ ಪಾತ್ರಗಳ ಬಗ್ಗೆಯೂ ಜನ ತಲೆ ಕೆಡಿಸಿಕೊಂಡಿದ್ದಾರೆ. ಈಗಾಗಲೇ ಬಿಡುಗಡೆಯಾಗಿರೋ ಎರಡು ಟ್ರೈಲರ್ ಮೂಲಕ ಎಲ್ಲವನ್ನೂ ಹೇಳಿದಂತೆ ಮಾಡಿ ಏನನ್ನೂ ಹೇಳದಂಥಾ ಟ್ರಿಕ್ಸು ಅನುಸರಿಸೋ ಮೂಲಕ ಚಂದ್ರು ಇಂಥಾ ಕುತೂಹಲವನ್ನು ಕಾಪಿಟ್ಟುಕೊಂಡಿದ್ದಾರೆ. ಬೇರೆಯವರ ಕಥೆ ಹಾಗಿರಲಿ, ಖುದ್ದು ಕಿಚ್ಚ