Widgets Magazine

ಕಿಶೋರ್ ಶೆಟ್ಟಿ ಬಂಧನ ಅಕುಲ್ ಬಾಲಾಜಿಗೂ ಕುತ್ತು ತರುತ್ತಾ?

ಬೆಂಗಳೂರು| Krishnaveni K| Last Modified ಶನಿವಾರ, 19 ಸೆಪ್ಟಂಬರ್ 2020 (11:16 IST)
ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣಕ್ಕೆ ಪೊಲೀಸರಿಗೆ ಬಾಲಿವುಡ್ ಸಂಪರ್ಕವಿದ್ದ ಮತ್ತೊಬ್ಬ ನಟ ಕಿಶೋರ್ ಶೆಟ್ಟಿ ಬಂಧನವಾಗಿದ್ದು, ಈತನಿಂದಾಗಿ ನಿರೂಪಕ ಅಕುಲ್ ಸಂಕಷ್ಟಕ್ಕೆ ಸಿಲುಕಬಹುದೇ ಎಂಬ ಪ್ರಶ್ನೆ ಮೂಡಿದೆ.

 
ನಟ, ನಿರ್ದೇಶಕ ಪ್ರಭುದೇವ ಶಿಷ್ಯರಾಗಿದ್ದ ಕಿಶೋರ್ ಶೆಟ್ಟಿ ಡ್ರಗ್ ಸರಬರಾಜು ಮಾಡುತ್ತಿದ್ದ ಎನ್ನಲಾಗಿದೆ. ಈತ ಸಾಕಷ್ಟು ಕನ್ನಡ ರಿಯಾಲಿಟಿ ಶೋಗಳಲ್ಲೂ ಭಾಗಿಯಾಗಿದ್ದ. ಹೀಗಾಗಿ ಈತನ ಜತೆ ರಿಯಾಲಿಟಿ ಶೋಗಳ ನಿರೂಪಕರಾಗಿಯೇ ಖ್ಯಾತಿ ಪಡೆದಿದ್ದ ಅಕುಲ್ ಸಂಪರ್ಕವಿದೆಯೇ ಎಂಬ ಬಗ್ಗೆಯೂ ವಿಚಾರಣೆ ನಡೆಯಲಿದೆ. ಒಂದು ವೇಳೆ ಅದು ಸಾಬೀತಾದರೆ ಅಕುಲ್ ಗೆ ಈ ಪ್ರಕರಣ ಮತ್ತಷ್ಟು ಕಗ್ಗಂಟಾಗುವ ಸಾಧ‍್ಯತೆಯಿದೆ.
ಇದರಲ್ಲಿ ಇನ್ನಷ್ಟು ಓದಿ :