ಚೆನ್ನೈ: ಕಾಲಿವುಡ್ ನ ಖ್ಯಾತ ನಟಿಯೊಬ್ಬರಿಗೆ ದೇವ ಮಾನವ ನಿತ್ಯಾನಂದನ ಕೈಲಾಸ ರಾಷ್ಟ್ರವನ್ನು ನೋಡುವ ಆಸೆಯಾಗಿದೆಯಂತೆ. ನಿತ್ಯಾನಂದ ಕೈಲಾಸವೆಂಬ ಹೊಸ ರಾಷ್ಟ್ರವನ್ನು ಸ್ಥಾಪಿಸಿದಲ್ಲದೇ ಗಣೇಶ ಚತುರ್ಥಿಯಂದು ಹೊಸ ಕರೆನ್ಸಿಯನ್ನು ಕೂಡ ಪರಿಚಯಿಸಿದ್ದಾರೆ. ಆದರೆ ಇದೀಗ ಕಾಲಿವುಡ್ ನಟಿ ಮೀರಾ ಮಿಥುನ್ ಗೆ ನಿತ್ಯಾನಂದನ ಕೈಲಾಸ ರಾಷ್ಟ್ರವನ್ನು ನೋಡುವ ಆಸೆಯಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ತಿಳಿಸಿದ್ದಾರೆ.ಈ ಬಗ್ಗೆ ಟ್ವೀಟ್ ಮಾಡಿರುವ ನಟಿ, ಎಲ್ಲರೂ ಅವರ ಕಾಲೆಳೆದರು, ಎಲ್ಲರೂ ಅವರನ್ನು ಅವಮಾನ ಮಾಡಿದರು.