ಕೊರೊನಾಕ್ಕೆ ಕಾಲಿವುಡ್ ನ ಖ್ಯಾತ ನಿರ್ದೇಶಕ ಬಲಿ

ಚೆನ್ನೈ| pavithra| Last Modified ಬುಧವಾರ, 28 ಏಪ್ರಿಲ್ 2021 (13:17 IST)
ಚೆನ್ನೈ : ಹಿರಿಯ ನಿರ್ದೇಶಕರಾದ ಕೆ.ಬಾಲಚಂದರ್ ಮತ್ತು ಭಾರತಿರಾಜರ ಸಹಾಯಕರಾಗಿ ಕೆಲಸ ಮಾಡಿದ್ದ ನಿರ್ದೇಶಕ ತಮೀರಾ ಅವರು ನಿನ್ನೆ ಬೆಳಿಗ್ಗೆ ನಿಧನರಾಗಿದ್ದಾರೆ.

ಇವರಿಗೆ ಕೆಲವು ದಿನಗಳ ಹಿಂದೆ ಕೊರೊನಾ ಸೋಂಕು ತಗುಲಿದ್ದು, ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ದುರದೃಷ್ಟವಶಾತ್ ಅವರು ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ.

ಇವರು  ‘ಆನ್ ದೇವತೈ’ ಹಾಗೂ ‘ರೆಟ್ಟೈಸುಜಿ’ ಚಿತ್ರಗಳನ್ನು ನಿರ್ಮಿಸಿದ್ದಾರೆ. ಇವರ ಸಾವು ಕಾಲಿವುಡ್ ಅಭಿಮಾನಿಗಳನ್ನು ಬೆಚ್ಚಿ ಬೀಳಿಸಿದ್ದು, ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಂತಾಪ ಸೂಚಿಸಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :