ಚಿತ್ರಕಥಾಗೆ ಹೊಸ ದಿಕ್ಕು ತೋರೋ ಕೊರವಂಜಿ!

ಬೆಂಗಳೂರು, ಗುರುವಾರ, 11 ಜುಲೈ 2019 (14:06 IST)

ಹಲವಾರು ವರ್ಷಗಳ ಕಾಲ ನಿರ್ದೇಶಕನಾಗೋ ಕನಸಿನೊಂದಿಗೆ ಸೈಕಲ್ಲು ಹೊಡೆದವರು ಯಶಸ್ವಿ ಬಾಲಾದಿತ್ಯ. ಈವರೆಗೂ ತಂತ್ರಜ್ಞರಾಗಿ ಬೇರೆ ಭಾಷೆಗಳಲ್ಲಿಯೂ ಕಾರ್ಯ ನಿರ್ವಹಿಸಿ, ಕನ್ನಡದಲ್ಲಿ ಹೆಸರಾಂತ ನಿರ್ದೇಶಕರ ಗರಡಿಯಲ್ಲಿಯೂ ಪಳಗಿಕೊಂಡಿರುವ ಯಶಸ್ವಿ ಪಾಲಿಗೆ ಚಿತ್ರಕಥಾ ಎಂಬುದು ಮೊದಲ ಕನಸು. ಆದರೆ ಈ ಆರಂಭದ ಹೆಜ್ಜೆಯಲ್ಲಿಯೇ ಅವರು ಎಲ್ಲರೂ ತಿರುಗಿ ನೋಡುವಂತೆ ಮಾಡಿ ಬಿಟ್ಟಿದ್ದಾರೆ.
chitrakata
ಪ್ರಜ್ವಲ್ ಎಂ ರಾಜ ನಿರ್ಮಾಣ ಮಾಡಿರೋ ಈ ಚಿತ್ರತಂಡದ ಬಹುತೇಕರಿಗೆ ಮೊದಲ ಹೆಜ್ಜೆ. ನಿರ್ಮಾಪಕರಾಗಿ ಪ್ರಜ್ವಲ್ ಅವರಿಗೂ ಇದು ಮೊದಲ ಅನುಭವ. ಇನ್ನು ನಾಯಕನಾಗಿರೋ ಸುಜಿತ್ ರಾಥೋಡ್ ಅವರಿಗೂ ಇದು ಆರಂಭದ ಸಂಭ್ರಮವೇ. ಹೀಗೆ ಹೊಸಬರ ತಂಡ ಕಟ್ಟಿಕೊಂಡಿರೋ ಯಶಸ್ವಿ ಸಸ್ಪೆನ್ಸ್ ಥ್ರಿಲ್ಲರ್ ಜಾನರಿನಲ್ಲಿಯೇ ವಿಶಿಷ್ಟವಾಗಿ ದಾಖಲಾಗುವಂತೆ ಈ ಚಿತ್ರವನ್ನು ಕಟ್ಟಿ ಕೊಟ್ಟಿದ್ದಾರೆ.
 
ಚಿತ್ರಕಥಾದಲ್ಲಿ ಹಾಗೆ ಬಂದು ಹೀಗೆ ಹೋಗೋ ಸಣ್ಣ ಪಾತ್ರಗಳೂ ಕೂಡಾ ಕಥೆಗೊಂದು ಟ್ವಿಸ್ಟು ಕೊಡುತ್ತಲೇ ಪ್ರೇಕ್ಷಕರ ಮನಸಲ್ಲುಳಿಯುವಷ್ಟು ಶಕ್ತವಾಗಿದೆಯಂತೆ. ಸುಧಾರಾಣಿ, ತಬಲಾ ನಾಣಿ, ಬಿ ಜಯಶ್ರೀ ಸೇರಿದಂತೆ ಎಲ್ಲರ ಪಾತ್ರಗಳೂ ಕೂಡಾ ಅಂಥಾದ್ದೇ ಛಾಯೆ ಹೊಂದಿವೆಯಂತೆ. ರಂಗಭೂಮಿಯಲ್ಲಿ ಹಲವಾರು ವರ್ಷಗಳಿಂದ ಸಕ್ರಿಯರಾಗಿರೋ ಹಿರಿಯ ನಟಿ ಬಿ ಜಯಶ್ರೀ ಅವರಿಲ್ಲಿ ಕೊರಹವಂಜಿಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಪಾತ್ರದ ಅವಧಿ ಕಡಿಮೆ. ಆದರೆ ಅದು ಸೃಷ್ಟಿಸೋ ಅಲೆಯಗಳು ಮಾತ್ರ ಪರಿಣಾಮಕಾರಿ. ಅದು ಇಡೀ ಚಿತ್ರಕ್ಕೆ ಹೊಸಾ ಟ್ವಿಸ್ಟು ನೀಡುತ್ತೆ. ನಿಜಕ್ಕೂ ಈ ಪಾತ್ರಗಳ ಕಮಾಲ್ ಏನೆಂಬುದು ಈ ವಾರ ತಿಳಿಯಲಿದೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಚಿತ್ರಕಥಾ: ಮತ್ತೆ ಬಾರಿನಲ್ಲಿ ತಬಲದ ಸೌಂಡು!

ತಬಲಾ ನಾಣಿ ಕನ್ನಡ ಚಿತ್ರರಂಗದಲ್ಲಿ ವಿಶಿಷ್ಟ ಮ್ಯಾನರಿಸಂ ಮತ್ತು ಬೇರೆಯದ್ದೇ ಥರದ ಪಾತ್ರಗಳ ಮೂಲಕ ...

news

ಚಿತ್ರಕಥಾ: ಚಿತ್ರದಿಂದೆದ್ದು ಕೊಲ್ಲಲು ಹವಣಿಸೋ ಅಘೋರಿ!

ವಿಶಿಷ್ಟವಾದ ಕಥೆಯನ್ನು ಹೊಂದಿರುವ ಚಿತ್ರಕಥಾ ಚಿತ್ರ ಈ ವಾರ ತೆರೆ ಕಾಣಲು ಸಜ್ಜುಗೊಂಡಿದೆ. ಯಶಸ್ವಿ ...

news

ಚಿತ್ರಕಥಾ ಮೂಲಕ ಮತ್ತೆ ಬಂದರು ಸುಧಾರಾಣಿ!

ಯಶಸ್ವಿ ಬಾಲಾದಿತ್ಯ ನಿರ್ದೇಶನದ ಚಿತ್ರಕಥಾ ಈ ವಾರ ಬಿಡುಗಡೆಯಾಗಲಿದೆ. ಹೊಸಬರ ತಂಡ, ಹೊಸತನ ಹೊಂದಿರೋ ಕಥೆಯ ...

news

ರಚಿತಾ ರಾಮ್ ಮೇಲೆ ರಕ್ಷಿತಾ ಪ್ರೇಮ್ ಮುನಿಸಿಕೊಂಡಿದ್ದಾರಾ? ಕ್ರೇಜಿ ಕ್ವೀನ್ ಹೇಳಿದ್ದೇನು?

ಬೆಂಗಳೂರು: ಸಹೋದರ ರಾಣಾನನ್ನು ಸ್ಯಾಂಡಲ್ ವುಡ್ ಗೆ ಪರಿಚಯಿಸುತ್ತಿರುವ ರಕ್ಷಿತಾ ಪ್ರೇಮ್ ಏಕ್ ಲವ್ಯಾ ಎಂಬ ...