ಕನ್ನಡದಲ್ಲಿ ಶೀಘ್ರವೇ ರಿಲೀಸ್ ಆಗಲಿದೆ ಖ್ಯಾತ ನಟರ ಸಿನಿಮಾಗಳು

Navya K M| Last Updated: ಮಂಗಳವಾರ, 28 ಜೂನ್ 2016 (10:15 IST)
ಸದ್ಯ ಕನ್ನಡದಲ್ಲಿ ಹೊಸಬರ ಸಿನಿಮಾಗಳ ಹವಾ ಜೋರಾಗಿದೆ. ರಕ್ಷಿತ್ ಶಟ್ಟಿ ಅಭಿನಯದ ಗೋಧಿ ಬಣ್ಣ ಸಾಧಾರಣ ಮೈಕಟ್ಟು, ತಿಲಕ್ ಅಭಿನಯದ ಕರ್ವ, ಯೂ ಟರ್ನ್ ಸಿನಿಮಾಗಳು ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿವೆ. ಹೀಗಿರುವಾಗಲೇ ಕನ್ನಡ ಖ್ಯಾತ ನಟರುಗಳಾದ ಸುದೀಪ್, ಶಿವರಾಜ್ ಕುಮಾರ್, ಉಪೇಂದ್ರ, ಪುನೀತ್ ರಾಜ್ ಕುಮಾರ್ ಅವರ ಸಿನಿಮಾಗಳು ಒಂದರ ಹಿಂದೆ ಒಂದರಂತೆ ರಿಲೀಸ್ ಗೆ ರೆಡಿಯಾಗಿವೆ.
 
ಇನ್ನೆರಡು ತಿಂಗಳಲ್ಲಿ ಅಭಿಮಾನಿಗಳಿಗೆ ಭರ್ಜರಿ ಮನೋರಂಜನೆ ಸಿಗೋ ಪಕ್ಕಾ ಆಗಿದೆ. ಯಾಕಪ್ಪಾ ಅಂದ್ರೆ ಉಪೇಂದ್ರ ಅಭಿನಯದ ಕಲ್ಪನಾ -2, ಪುನೀತ್ ರಾಜ್ ಕುಮಾರ್ ಅಭಿನಯದ ದೊಡ್ಮನೆ ಹುಡ್ಗ, ಶಿವರಾಜ್ ಕುಮಾರ್ ಅಭಿನಯದ ಸಂತೆಯಲ್ಲಿ ನಿಂತ ಕಬೀರ, ಸುದೀಪ್ ಅಭಿನಯದ ಕೋಟಿಗೊಬ್ಬ ಸಿನಿಮಾ ಒಂದರ ಹಿಂದೆ ಒಂದರಂತೆ ರಿಲೀಸ್ ಆಗಲಿದೆ,ಹಾಗಾಗಿ  ಇನ್ನೆರಡು ತಿಂಗಳಿನಲ್ಲಿ ಎಲ್ಲಾ ಥಿಯೇಟರ್ ಗಳಲ್ಲಿ ಕನ್ನಡದ ದೊಡ್ಡ ದೊಡ್ಡ ಸ್ಟಾರ್‍ಗಳ ಸಿನಿಮಾಗಳೇ ಕಾಣಿಸಲಿವೆ. ಅಭಿಮಾನಿಗಳು ಕೂಡ ಈ ಸಿನಿಮಾಗಳು ಯಾವಾಗ ರಿಲೀಸ್ ಆಗ್ತವೆ ಅಂತಾ ಕಾಯುತ್ತಾ ಕುಳಿತಿದ್ದಾರೆ.
 
ಇನ್ನು ಈ ಎಲ್ಲಾ ಸಿನಿಮಾಗಳು ರಾಜ್ಯದಾದ್ಯಂತ 200ರಿಂದ 300 ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿವೆ. ಹಾಗಾಗಿ ಕೆಲ ತಾರೆಯರ ಸಿನಿಮಾಗಳ ನಡುವೆ ಪೈಪೋಟಿ ಉಂಟಾದರು ಅಚ್ಚರಿಯೇನಿಲ್ಲ.ಇನ್ನು ಈ ಎಲ್ಲಾ ಸಿನಿಮಾಗಳು ರಜಿನಿಕಾಂತ್ ಅಭಿನಯದ ಕಬಾಲಿ ಸಿನಿಮಾ ರಿಲೀಸ್ ಆದ ಬಳಿಕ ರಿಲೀಸ್ ಆಗುವ ಸಾಧ್ಯತೆಯಿದೆ. ಮುಂದಿನ ತಿಂಗಳು ಜುಲೈ 15ರಂದು ಕಬಾಲಿ ಸಿನಿಮಾ ರಿಲೀಸ್ ಆಗುತ್ತಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :