ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಕೋಟಿಗೊಬ್ಬ 3 ಸಿನಿಮಾ ಇಂದು ಬೆಳಿಗ್ಗಿನ ಶೋ ರದ್ದಾಗಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.ಪ್ರಸನ್ನ ಥಿಯೇಟರ್ ಮುಂದೆ ಜಮಾಯಿಸಿದ್ದ ಅಭಿಮಾನಿಗಳು ಬೆಳಗಿನ 7 ಗಂಟೆ ಶೋ ನೋಡಲು ಕಾತುರದಿಂದ ಟಿಕೆಟ್ ಕಾಯ್ದಿರಿಸಿ ಕಾದಿದ್ದರು. ಆದರೆ ಥಿಯೇಟರ್ ಮುಂದೆ ತಾಂತ್ರಿಕ ಕಾರಣಗಳಿಂದ ಬೆಳಗಿನ ಶೋ ರದ್ದುಪಡಿಸಲಾಗಿದೆ. ಆನ್ ಲೈನ್ ಬುಕಿಂಗ್ ಮಾಡಿದವರಿಗೆ ಹಣ ಹಿಂದಿರುಗಿಸಲಾಗುವುದು ಎಂದು ಬೋರ್ಡ್ ಹಾಕಲಾಗಿತ್ತು.ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ‘ಬಾಸ್ ನ