ಬೆಂಗಳೂರು: ಕಿಚ್ಚ ಸುದೀಪ್ ಕೋಟಿಗೊಬ್ಬ 3 ಸಿನಿಮಾ ರಿಲೀಸ್ ಡೇಟ್ ಬಹುತೇಕ ಖಚಿತವಾಗಿದೆ. ಇದೇ ಮೇ 1 ರಂದು ಸಿನಿಮಾ ರಿಲೀಸ್ ಆಗುವ ನಿರೀಕ್ಷೆಯಿದೆ. ಮಹಾಶಿವರಾತ್ರಿ ದಿನ ಕೋಟಿಗೊಬ್ಬ 3 ಟೀಸರ್ ರಿಲೀಸ್ ಆಗಿತ್ತು. ಕಿಚ್ಚ ಸುದೀಪ್ ಸ್ಟೈಲಿಶ್ ಲುಕ್ ಗೆ ಜನರು ಫಿದಾ ಆಗಿದ್ದರು. ಕೋಟಿಗೊಬ್ಬ 2 ಸಿನಿಮಾದ ಮುಂದುವರಿದ ಭಾಗ ಇದಾಗಿದೆ.ಇದೀಗ ಕಾರ್ಮಿಕರ ದಿನವಾದ ಮೇ 1 ರಂದು ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಚಿಂತನೆ ನಡೆಸಿದೆ.