ರಿ ರಿಲೀಸ್ ಆಗಲಿರುವ ಅಜೇಯ್ ರಾವ್ ‘ಕೃಷ್ಣ ಟಾಕೀಸ್’

ಬೆಂಗಳೂರು| Krishnaveni K| Last Modified ಮಂಗಳವಾರ, 20 ಜುಲೈ 2021 (11:54 IST)
ಬೆಂಗಳೂರು: ಅನ್ ಲಾಕ್ 4.0 ರಲ್ಲಿ ಸರ್ಕಾರ ಚಿತ್ರಮಂದಿರಗಳನ್ನು ತೆರೆಯಲು ಅನುಮತಿ ನೀಡಿದೆ. ಇದೀಗ ಮೊದಲ ಹಂತದಲ್ಲಿ ಕೆಲವು ಸಿನಿಮಾಗಳ ರಿ ರಿಲೀಸ್ ಪರ್ವ ಪ್ರಾರಂಭವಾಗುವ ಸಾಧ್ಯತೆಯಿದೆ.

 
ಇದೀಗ ಅಜೇಯ್ ರಾವ್ ಅಭಿನಯದ ‘ಕೃಷ್ಣ ಟಾಕೀಸ್’ ಸಿನಿಮಾ ಕಡೆಯಿಂದ ಸುದ್ದಿಯೊಂದು ಬಂದಿದೆ. ಕೊರೋನಾ ಪ್ರಕರಣಗಳು ಹೆಚ್ಚಲು ಆರಂಭವಾದ ಕೆಲವೇ ದಿನಗಳಲ್ಲಿ ಕೃಷ್ಣ ಟಾಕೀಸ್ ಸಿನಿಮಾ ಬಿಡುಗಡೆಯಾಗಿತ್ತು. ಆದರೆ ಕೊರೋನಾ ಹೆಚ್ಚಾಗಿದ್ದರಿಂದ ಚಿತ್ರತಂಡ ಜನರ ಹಿತದೃಷ್ಟಿಯಿಂದ ಸಿನಿಮಾವನ್ನು ಥಿಯೇಟರ್ ನಿಂದ ಹಿಂಪಡೆದಿತ್ತು.
 
ಇದೀಗ ಥಿಯೇಟರ್ ಗಳು ಶೇ.50 ರಷ್ಟು ಹಾಜರಾತಿಯೊಂದಿಗೆ ತೆರೆಯಲು ಅನುಮತಿ ಸಿಕ್ಕ ತಕ್ಷಣವೇ ಕೃಷ್ಣ ಟಾಕೀಸ್ ಚಿತ್ರತಂಡ ಸಿನಿಮಾ ಬಿಡುಗಡೆಗೆ ಸಿದ್ಧತೆ ನಡೆಸಿದೆ. ಕೆಲವೇ ದಿನಗಳಲ್ಲಿ ಕೃಷ್ಣ ಟಾಕೀಸ್ ಮರು ರಿಲೀಸ್ ದಿನಾಂಕ ಪ್ರಕಟವಾಗಲಿದೆ.
ಇದರಲ್ಲಿ ಇನ್ನಷ್ಟು ಓದಿ :