ಕೃಷ್ಣ ಟಾಕೀಸ್ ಏಪ್ರಿಲ್ 16 ಕ್ಕೆ ಟಾಕೀಸ್ ಗೆ

ಬೆಂಗಳೂರು| Krishnaveni K| Last Modified ಬುಧವಾರ, 7 ಏಪ್ರಿಲ್ 2021 (08:43 IST)
ಬೆಂಗಳೂರು: ಅಜೇಯ್ ರಾವ್ ಅಭಿನಯದ ‘ಕೃಷ್ಣ ಟಾಕೀಸ್’ ಸಿನಿಮಾ ಏಪ್ರಿಲ್ 16 ಕ್ಕೆ ತೆರೆಗೆ ಬರುವುದು ಪಕ್ಕಾ ಆಗಿದೆ. ಈ ಮೂಲಕ ಮತ್ತೆ ತಮ್ಮ ಅದೃಷ್ಟದ ಹೆಸರಿನಿಂದ ಗೆಲ್ಲುವ ವಿಶ್ವಾಸದಲ್ಲಿ ಅಜೇಯ್ ರಾವ್ ಇದ್ದಾರೆ.
 

ಇದುವರೆಗೆ ಕೃಷ್ಣ ಎಂಬ ಟೈಟಲ್ ನಲ್ಲಿ ಅಜೇಯ್ ರಾವ್ ನಟಿಸಿದ ಸಿನಿಮಾಗಳೆಲ್ಲವೂ ಸೂಪರ್ ಹಿಟ್ ಆಗಿದ್ದವು. ಹೀಗಾಗಿ ಮತ್ತೆ ತಮ್ಮ ಸಕ್ಸಸ್ ಟೈಟಲ್ ಮೊರೆ ಹೋಗಿದ್ದಾರೆ ಅಜೇಯ್ ರಾವ್.
 
ಈಗಾಗಲೇ ಇದರ ಹಾಡುಗಳಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಅಲ್ಲದೆ ಚಿತ್ರ ತಂಡ ವಿಭಿನ್ನವಾಗಿ ಪ್ರಚಾರ ಮಾಡುವ ಮೂಲಕ ಜನರನ್ನು ಸೆಳೆಯುವ ಪ್ರಯತ್ನ ಮಾಡಿದೆ. ಸರ್ಕಾರದ ನಿಯಮದಂತೆ ಶೇ.50 ಪ್ರೇಕ್ಷಕರ ಉಪಸ್ಥಿತಿಯಲ್ಲಿ ಸಿನಿಮಾ ಥಿಯೇಟರ್ ನಲ್ಲಿ ಪ್ರದರ್ಶನಗೊಳ್ಳಲಿದೆ.
ಇದರಲ್ಲಿ ಇನ್ನಷ್ಟು ಓದಿ :