ಬೆಂಗಳೂರು: ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಮದುವೆ ಸಂಭ್ರಮದಲ್ಲಿದ್ದಾರೆ. ಫೆಬ್ರವರಿ 10 ಕ್ಕೆ ಉದ್ಯಮಿ ಮಂಜುನಾಥ್ ಪುತ್ರಿ ರೇವತಿ ಜತೆ ನಿಖಿಲ್ ನಿಶ್ಚಿತಾರ್ಥ ನಡೆಯಲಿದೆ.ಆದರೆ ಮದುವೆ ಮಾತ್ರ ಬೆಂಗಳೂರಿನಲ್ಲಿ ನಡೆಯಲ್ಲ ಎಂದಿರುವ ಕುಮಾರಸ್ವಾಮಿ ಇದಕ್ಕೆ ಕಾರಣವನ್ನೂ ಹೇಳಿದ್ದಾರೆ. ನಿಶ್ಚಿತಾರ್ಥ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಅದ್ಧೂರಿಯಾಗಿ ನಡೆಯಲಿದೆ ಎನ್ನಲಾಗಿದೆ.ಆದರೆ ಮದುವೆ ಸಮಾರಂಭವನ್ನು ತಮಗೆ ರಾಜಕೀಯ ಮರುಜನ್ಮ ನೀಡಿದ ರಾಮನಗರ-ಚನ್ನಪಟ್ಟಣ ನಡುವೆ