ಬಿಗ್ ಬಾಸ್ ಮನೆಯೊಳಗಿರುವ ಕುರಿ ಪ್ರತಾಪ್ ಮನೆ ಮಾರಾಟಕ್ಕಿದೆ ನೋಡಿ!

ಬೆಂಗಳೂರು| Krishnaveni K| Last Modified ಶನಿವಾರ, 26 ಅಕ್ಟೋಬರ್ 2019 (09:20 IST)
ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿರುವ ಹಾಸ್ಯ ನಟ ಕುರಿ ಪ್ರತಾಪ್ ಮನೆ ಮಾರಾಟಕ್ಕಿದೆ! ಹಾಗಂತ ನಿಜವಾಗಿ ಮನೆ ಮಾರಾಟಕ್ಕಿರುವುದಲ್ಲ ಬಿಡಿ. ಕುರಿ ಪ್ರತಾಪ್ ಅಭಿನಯದ ಮನೆ ಮಾರಾಕ್ಕಿದೆ ಸಿನಿಮಾದ ಹಾಡು ಲಾಂಚ್ ಆಗುತ್ತಿದೆ ಅಷ್ಟೇ.

 
ಕುರಿ ಪ್ರತಾಪ್ ಕೇವಲ ಕಾಮಿಡಿಗೆ ಸೀಮಿತ ಎಂದುಕೊಂಡಿದ್ದ ಅಭಿಮಾನಿಗಳಿಗೆ ಈ ಸಿನಿಮಾದಲ್ಲಿ ನಾಯಕನಾಗಿಯೂ ಝಲಕ್ ತೋರಿಸಲಿದ್ದಾರೆ. ಈ ಸಿನಿಮಾದ ಮೊದಲ ಹಾಡು ಈಗಾಗಲೇ ಬಿಡುಗಡೆಯಾಗಿತ್ತು.
 
ಇದೀಗ ಎರಡನೇ ಹಾಡು ಬಿಡುಗಡೆಯಾಗುತ್ತಿದ್ದು ಅಕ್ಟೋಬರ್ 28 ರಂದಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಮಂಜು ಸ್ವರಾಜ್ ನಿರ್ದೇಶನದ ಮನೆ ಮಾರಾಟಕ್ಕಿದೆ ಸಿನಿಮಾದಲ್ಲಿ ಕುರಿ ಪ್ರತಾಪ್ ನಾಯಕಿ ಜತೆಗಿನ ಡ್ಯುಯೆಟ್ ಹಾಡು ಈ ದಿನ ಬಿಡುಗಡೆಯಾಗುತ್ತಿದೆ.
ಇದರಲ್ಲಿ ಇನ್ನಷ್ಟು ಓದಿ :