ಬೆಂಗಳೂರಿನಲ್ಲಿ ರಾಜ ಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಕಳೆದ ಕೆಲವು ದಿನಗಳಿಂದ ಭರದಿಂದ ಸಾಗುತ್ತಿದೆ. ರಾಜಾ ಕಾಲುವೆಯನ್ನು ಒತ್ತುವರಿ ಮಾಡಿಕೊಂಡು ಅದರಲ್ಲಿ ಹತ್ತಾರು ಅಂತಸ್ತಿನ ಮನೆ ಕಟ್ಟಿಕೊಂಡ ಅನೇಕರು ಇದೀಗ ಮನೆ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ನಿರಂತರವಾಗಿ ಸಾಗುತ್ತಿರುವ ಒತ್ತೆವಪಿ ತೆರವು ಕಾರ್ಯಾಚರಣೆಯಿಂದಾಗಿ ಒತ್ತುವರಿದಾರರ ಎದೆಯಲ್ಲಿ ನಡುಕ ಶುರುವಾಗಿದೆ. ಇನ್ನು ಈ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯ ಬಿಸಿ ನಟ ದರ್ಶನ್ ಅವರ ನಿವಾಸಕ್ಕೂ ತಟ್ಟಲಿದೆಯಂತೆ. ರಾಜರಾಜೇಶ್ವರಿ ನಗರದಲ್ಲಿರುವ