Widgets Magazine

ಹೊಸ ದಾಖಲೆ ಮಾಡಲಿರುವ ಪುನೀತ್ ನಿರ್ಮಾಣದ ಸಿನಿಮಾ

ಬೆಂಗಳೂರು| Krishnaveni K| Last Modified ಶನಿವಾರ, 16 ಮೇ 2020 (09:06 IST)
ಬೆಂಗಳೂರು: ಪುನೀತ್ ರಾಜಕುಮಾರ್ ನಿರ್ಮಾಣ ಸಂಸ್ಥೆ ಪಿಆರ್ ಕೆ ಪ್ರೊಡಕ್ಷನ್ ವತಿಯಿಂದ ನಿರ್ಮಾಣವಾದ ‘ಲಾ’ ಮತ್ತು ‘ಫ್ರೆಂಚ್ ಬಿರಿಯಾನಿ’ ಸ್ಯಾಂಡಲ್ ವುಡ್ ಇತಿಹಾಸದಲ್ಲೇ ಹೊಸ ಮೈಲಿಗಲ್ಲು ಸೃಷ್ಟಿಸಲಿದೆ.

 
ಸದ್ಯಕ್ಕೆ ಲಾಕ್ ಡೌನ್ ಆಗಿರುವುದರಿಂದ ಚಿತ್ರಮಂದಿರಗಳು ತೆರೆಯುತ್ತಿಲ್ಲ. ಹೀಗಾಗಿ ‘ಲಾ’ ಹಾಗೂ ‘ಫ್ರೆಂಚ್ ಬಿರಿಯಾನಿ’ ತಂಡ ತಮ್ಮ ಸಿನಿಮಾವನ್ನು ಅಮೆಝೋನ್ ಪ್ರೈಮ್ ಮೂಲಕ ಬಿಡುಗಡೆ ಮಾಡುತ್ತಿದ್ದಾರೆ. ಈ ಮೂಲಕ ಡಿಜಿಟಲ್ ಫ್ಲ್ಯಾಟ್ ಫಾರಂನಲ್ಲಿ ಬಿಡುಗಡೆಯಾದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
 
ಫ್ರೆಂಚ್ ಬಿರಿಯಾನಿ ಸಿನಿಮಾದಲ್ಲಿ ಡ್ಯಾನಿಶ್ ಸೇಠ್ ನಾಯಕರಾಗಿದ್ದಾರೆ. ಪನ್ನಗಾ ಭರಣ ಸಿನಿಮಾ ನಿರ್ದೇಶಿಸಿದ್ದು, ವಾಸುಕಿ ವೈಭವ್ ಸಂಗೀತ ಸಂಯೋಜಿಸಿದ್ದಾರೆ. ಜುಲೈ 24 ರಂದು ಅಮೆಝೋನ್ ಪ್ರೈಮ್ ನಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಇನ್ನು, ‘ಲಾ’ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಚಂದ್ರನ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾ ಜೂನ್ 26 ಕ್ಕೆ ಪ್ರೈಮ್ ನಲ್ಲಿ ಲಭ್ಯವಿರಲಿದೆ.
ಇದರಲ್ಲಿ ಇನ್ನಷ್ಟು ಓದಿ :