ರಶ್ಮಿಕಾ ಮಂದಣ್ಣಗೆ ಈ ನಟಿಯ ಜೀವನಕಥೆಯಲ್ಲಿ ನಟಿಸುವ ಆಸೆಯಂತೆ

ಹೈದರಾಬಾದ್| pavithra| Last Modified ಮಂಗಳವಾರ, 5 ಜನವರಿ 2021 (11:08 IST)
ಹೈದರಾಬಾದ್ : ಟಾಲಿವುಡ್ ನ ಖ್ಯಾತ ನಟಿ ರಶ್ಮಿಕಾ ಮಂದಣ್ಣ  2008ರಲ್ಲಿ ಬಿಡುಗಡೆಯಾದ ಚಲೋ ಚಿತ್ರದ ಮೂಲಕ ಟಾಲಿವುಡ್ ಗೆ ಕಾಲಿಟ್ಟಿದ್ದಾರೆ. ಆನಂತರ ಅವರು ಗೀತಾ ಗೋವಿಂದಂ , ಸರಿಲೇರು ನಿಕೇವ್ವರ, ಭೀಷ್ಮ ಮುಂತಾದ ಬ್ಲಾಕ್ ಬಾಸ್ಟರ್ ಚಿತ್ರಗಳಲ್ಲಿ ನಟಿಸಿ ಖ್ಯಾತಿ ಗಳಿಸಿದ್ದಾರೆ.
ಇತ್ತೀಚೆಗೆ ಅವರಿಗೆ ಸಂದರ್ಶನವೊಂದರಲ್ಲಿ ನಿಮಗೆ ಜೀವನಕಥೆಯಧಾರಿತ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕರೆ ಯಾರ ಚಿತ್ರದಲ್ಲಿ ನಟಿಸುತ್ತೀರಿ ಎಂದು ಪ್ರಶ್ನಿಸಲಾಗಿತ್ತು. ಇದಕ್ಕೆ ಉತ್ತರಿಸಿದ ನಟಿ ಸ್ಟಾರ್ ನಾಯಕಿಯರ ಜೀವನ ಕಥೆಗಳನ್ನು ಆಯ್ಕೆ ಮಾಡುವುದಾಗಿ ಹೇಳಿದ್ದಾರೆ. ಹಾಗೇ ಆ ಕನಸಿನ ಪಾತ್ರಗಳಲ್ಲಿ ಅವಕಾಶ ಸಿಕ್ಕರೆ ತಾನು ಎಲ್ಲವನ್ನೂ ಬಿಟ್ಟುಕೊಡುವುದಿಲ್ಲ ಎಂದು ತಿಳಿಸಿದ್ದಾರೆ. ಅದರಲ್ಲೂ ಸ್ಟಾರ್ ನಟಿ ಶ್ರೀದೇವಿಯವರ ಜೀವನಕಥೆಯಾಧಾರಿತ ಚಿತ್ರದಲ್ಲಿ ನಟಿಸುವ ಹಂಬಲವನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.>


ಇದರಲ್ಲಿ ಇನ್ನಷ್ಟು ಓದಿ :