ಬೆಂಗಳೂರು: ಸ್ಯಾಂಡಲ್ ವುಡ್ ನಟ ಲೂಸ್ ಮಾದ ಯೋಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ವಿಚಾರವಾಗಿ ಕನ್ನಡಿಗರ ಆಕ್ರೋಶಕ್ಕೊಳಗಾಗಿದ್ದರು. ಇದೀಗ ಆ ವಿಚಾರಕ್ಕೆ ಸಂಬಂಧಿಸಿದಂತೆ ಕ್ಷಮೆ ಕೇಳಿದ್ದಾರೆ.ನಡೆದಿದ್ದೇನು?: ನಟ ಲೂಸ್ ಮಾದ ಯೋಗಿ ತಮ್ಮ ನಟನೆಯ ರೋಸಿ ಎನ್ನುವ ಸಿನಿಮಾದ ಫಸ್ಟ್ ಲುಕ್ ಅನಾವರಣ ಕಾರ್ಯಕ್ರಮದಲ್ಲಿ ತಮಿಳಿನಲ್ಲಿ ಮಾತನಾಡಿದ್ದಾರೆ. ವಿವೇಕ್ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೊದಲು ಕನ್ನಡದಲ್ಲಿ ಮಾತು ಆರಂಭಿಸಿ ಬಳಿಕ ತಮಿಳಿನಲ್ಲಿ ಮಾತು ಮುಂದುವರಿಸಿದ್ದಾರೆ.ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲಿ ತಮಿಳು