ಬೆಂಗಳೂರು: ಸ್ಯಾಂಡಲ್ ವುಡ್ ನಟ ಲೂಸ್ ಮಾದ ಯೋಗಿ ಇಂದು ತಮ್ಮ ಬಹುಕಾಲದ ಗೆಳತಿ ಸಾಹಿತ್ಯ ಜತೆ ವಿವಾಹವಾಗಿದ್ದಾರೆ. ಬನಶಂಕರಿಯಲ್ಲಿ ಇಂದು ಬೆಳಗಿನ ಜಾವದ ಮುಹೂರ್ತದಲ್ಲಿ ಬಾಲ್ಯದ ಗೆಳತಿ ಸಾಹಿತ್ಯ ಜತೆ ಯೋಗಿ ಸಪ್ತಪದಿ ತುಳಿದಿದ್ದಾರೆ. ನಟ ಯೋಗಿ ಮತ್ತು ಸಾಫ್ಟ್ ವೇರ್ ಉದ್ಯೋಗಿ ಸಾಹಿತ್ಯ ಪರಸ್ಪರ ಪ್ರೀತಿಸುತ್ತಿದ್ದರು.ಆರು ತಿಂಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋರಿ ಇಂದು ಹಿರಿಯರ ಸಮ್ಮುಖದಲ್ಲಿ ಸತಿ ಪತಿಗಳಾದರು. ಸರಳವಾಗಿ ನಡೆದ ವಿವಾಹ