ಬೆಂಗಳೂರು: ಲವ್ ಮಾಕ್ಟೇಲ್ 2 ಚಿತ್ರ ರಿಲೀಸ್ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವುದು ನಿರ್ದೇಶಕ, ನಟ ಡಾರ್ಲಿಂಗ್ ಕೃಷ್ಣ ಮತ್ತು ತಂಡದ ಮೊಗದಲ್ಲಿ ನಗು ಮೂಡಿಸಿದೆ.ಈ ಯಶಸ್ಸಿನ ಖುಷಿಯಲ್ಲಿ ತೇಲಾಡುತ್ತಿರುವ ಚಿತ್ರತಂಡಕ್ಕೆ ಈಗ ಮೂರನೇ ಭಾಗವನ್ನೂ ಮಾಡುತ್ತೀರಾ ಎಂಬ ಪ್ರಶ್ನೆ ಎದುರಾಗಿದೆ. ಈಗಾಗಲೇ ಲವ್ ಮಾಕ್ಟೇಲ್ 1 ಮತ್ತು ಎರಡನೇ ಭಾಗ ಯಶಸ್ವಿಯಾಗಿದೆ.ಲವ್ ಮಾಕ್ಟೇಲ್ 2 ಚಿತ್ರದ ಕ್ಲೈಮ್ಯಾಕ್ಸ್ ನೋಡಿದರೆ ಇಲ್ಲಿ ಮೂರನೇ ಭಾಗವನ್ನು ತಯಾರು ಮಾಡುವ ಅವಕಾಶವೂ ಇದೆ