ಪ್ರಧಾನಿ ಮೋದಿ ಮತ್ತು ಇಸ್ರೋ ವಿಜ್ಞಾನಿ ಜೊತೆ ಸಭೆ ನಡೆಸಿದ ನಟ ಮಾಧವನ್. ಯಾಕೆ ಗೊತ್ತಾ?

ಚೆನ್ನೈ| pavithra| Last Modified ಮಂಗಳವಾರ, 6 ಏಪ್ರಿಲ್ 2021 (14:21 IST)
ಚೆನ್ನೈ : ನಟ ಮಾಧವನ್ ಮುಂಬರುವ ಚಲನಚಿತ್ರ ‘ರಾಕೆಟ್ರಿ ದಿ ನಂಬಿ ಎಫೆಕ್ಟ್’ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಇದು ಮಾಜಿ ಇಸ್ರೋ ವಿಜ್ಞಾನಿ ನಂಬಿ ನಾರಾಯಣನ್ ಅವರ  ಜೀವನಚರಿತ್ರೆಯಾಗಿದೆ.

ಹೀಗಾಗಿ ನಟ ಮಾಧವನ್ ಕೆಲವು ವಾರಗಳ ಹಿಂದೆ ನಂಬಿ ನಾರಾಯಣನ್ ಅವರೊಂದಿಗೆ ಭಾರತೀಯ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ. ಮತ್ತು ಅವರು ಚಿತ್ರದ ತುಣುಕುಗಳನ್ನು ನೀಡಿದ್ದಾರೆ ಎಂದು ಮಾಧವನ್ ಬಹಿರಂಗಪಡಿಸಿದ್ದಾರೆ. ಜೊತೆಗೆ ನಂಬಿ ನಾರಾಯಣನ್ ಅವರೊಂದಿಗೆ ಕೆಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಈ ಸಭೆಯ ಫೋಟೊ ಹಂಚಿಕೊಂಡ ನಟ ಮಾಧವನ್, ಪ್ರಧಾನಿ ನರೇಂದ್ರ ಮೋದಿ ಮತ್ತು ನಂಬಿ ನಾರಾಯಣನ್ ಅವರ ಜೊತೆ ಚಿತ್ರದ ಬಗ್ಗೆ ಮಾತುಕತೆ ನಡೆಸಿರುವುದಾಗಿ ಹಾಗೂ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :