ಮುಂಬೈ: ನಗುಮೊಗದ ಚೆಲುವ ಮಾಧವನ್ ಎಂದರೆ ಎಷ್ಟೋ ಹುಡುಗಿಯರಿಗೆ ಫೇವರಿಟ್ ನಟ. ಆದರೆ ಮಾಧವನ್ ಈಗ ನಡುವಯಸ್ಸಾದರೂ ಅವರ ಮೇಲೆ ಹುಡುಗಿಯರ ಕ್ರೇಜ್ ಕಡಿಮೆಯಾಗಿಲ್ಲ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ.ಮಾಧವನ್ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಸೆಲ್ಫೀ ಫೋಟೋವೊಂದನ್ನು ಪ್ರಕಟಿಸಿ ವಯಸ್ಸಾಗುತ್ತಿದೆ ಎಂದು ಬರೆದುಕೊಂಡಿದ್ದರು. ಈ ಫೋಟೋದಲ್ಲಿ ಮಾಧವನ್ ತಲೆಗೂದಲು ಕೊಂಚ ಬೆಳ್ಳಗಾಗಿದ್ದರೂ, ಅವರ ಕಣ್ಣುಗಳಲ್ಲಿ ಅದೇ ಚಾರ್ಮ್ ಇದೆ.ಇದನ್ನು ನೋಡಿ ಅಭಿಮಾನಿಗಳು ಹಾಟ್, ಸೆಕ್ಸೀ ಎಂದೆಲ್ಲಾ ಕಾಮೆಂಟ್ ಮಾಡಿದ್ದರು.