ಬೆಂಗಳೂರು: ಇತ್ತೀಚೆಗಷ್ಟೇ ಕೊರೋನಾದಿಂದ ನಿಧನರಾದ ಪತಿ, ನಿರ್ಮಾಪಕ ಕೋಟಿ ರಾಮು ಅವರನ್ನು ನೆನೆದು ಪತ್ನಿ, ನಟಿ ಮಾಲಾಶ್ರೀ ಭಾವುಕರಾಗಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಬರೆದಿದ್ದಾರೆ. ನಿನ್ನೆ ರಾಮು ಜನ್ಮ ದಿನವಿತ್ತು. ಈ ಸಂಬಂಧ ಮಾಲಾಶ್ರೀ ಭಾವುಕರಾಗಿ ಪತಿಗೆ ಹುಟ್ಟುಹಬ್ಬದ ಶುಭಾಶಯದ ಜೊತೆಗೆ ಸಂದೇಶವನ್ನೂ ಬರೆದಿದ್ದಾರೆ.‘ನೀವು ನನ್ನ ಉಸಿರಲ್ಲಿ ಉಸಿರಾಗಿದ್ದಿರಿ. ನನ್ನ ಪಾಲಿಗೆ ದೇವರಾಗಿದ್ದಿರಿ. 23 ವರ್ಷಗಳ ಕಾಲ ನಿಮ್ಮ ಹುಟ್ಟುಹಬ್ಬವನ್ನು ನನ್ನ ಹುಟ್ಟುಹಬ್ಬವಾಗಿ ಆಚರಿಸಿ, ನನ್ನ ಉಸಿರಲ್ಲಿ ಉಸಿರಾಗಿದ್ದಿರಿ. ದಿನ