ಬೆಂಗಳೂರು: ಕೋಟಿ ರಾಮು ಕೊರೋನಾದಿಂದಾಗಿ ಸಾವನ್ನಪ್ಪುವ ಮೊದಲು ನಿರ್ಮಿಸಿದ್ದ ಸಿನಿಮಾ ಪ್ರಜ್ವಲ್ ದೇವರಾಜ್ ಅಭಿನಯದ ‘ಅರ್ಜುನ್ ಗೌಡ’. ಈ ಸಿನಿಮಾ ರಾಮು ಕನಸಾಗಿತ್ತು. ಆ ಕನಸನ್ನು ನನಸು ಮಾಡಲು ನಟಿ ಮಾಲಾಶ್ರೀ ಹೊರಟಿದ್ದಾರೆ.ಗಂಡನ ಕೊನೆಯ ಸಿನಿಮಾವನ್ನು ರಿಲೀಸ್ ಮಾಡುವ ಜವಾಬ್ಧಾರಿಯನ್ನು ಮಾಲಾಶ್ರೀ ಹೊತ್ತುಕೊಂಡಿದ್ದಾರೆ. ಡಿಸೆಂಬರ್ 31 ಕ್ಕೆ ಅರ್ಜುನ್ ಗೌಡ ತೆರೆ ಕಾಣಲಿದೆ.ಆಕ್ಷನ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಈ ಸಿನಿಮಾದಲ್ಲಿ ಪ್ರಜ್ವಲ್ ಗೆ ನಾಯಕಿಯಾಗಿ ಪ್ರಿಯಾಂಕ ತಿಮ್ಮೇಶ್ ಅಭಿನಯಿಸಿದ್ದಾರೆ.